ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಶನ್ MEA ವತಿಯಿಂದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ಮೇ 12ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾದ ದೀಪಕ್ ಬಿ.ಸಿ, NITK, Surathkal ಇವರು “Product Design & Development” ಎಂಬ ವಿಷಯದಲ್ಲಿಉಪನ್ಯಾಸ ನೀಡಿದರು. ಕಾಲೇಜಿನ ಸಿ.ಇ.ಒ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿಸದಸ್ಯರಾದಡಾ. ಉಜ್ವಲ್‌ಯು.ಜೆ.ಗೌರವ ಅತಿಥಿ ನೆಲೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗವನ್ನು ಉಪಯೋಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.


ವಿಭಾಗ ಮುಖ್ಯಸ್ಥರಾದ ಪ್ರೊ.ರಾಘವೇಂದ್ರ ಬಿ.ಕಾಮತ್‌ಅವರು Product Design ಬಗ್ಗೆ ಮಾತನಾಡಿ ಇದು ಪ್ರಾಜೆಕ್ಟ್‌ಗಳಿಗೆ ಉಪಯೋಗಕಾರಿ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಯವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಪ್ರತೀಕ್ ಸಿ.ಎಸ್. ಮತ್ತು ಪುನೀತ್ ಪ್ರಾರ್ಥಿಸಿದರು, ಪೃಥ್ವಿರಾಜ್ ಅತಿಥಿಗಳನ್ನು ಪರಿಚಯಿಸಿದರು.ಮೈಪಾಲ್ ಸಿಂಗ್ ಸ್ವಾಗತಿಸಿ, ಶಿವಪ್ರಸಾದ್ ಧನ್ಯವಾದ ಸಮರ್ಪಿಸಿದರು.ಜೀವಿತ ಮತ್ತು ನಿಶಾ ಜೆ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿಡಾ.ಸುನಿಲ್ ಕುಮಾರ್ ಎಂ., ಪ್ರೊ.ಅಭಿಜ್ಞ ಬಿ.ಬಿ. ಮತ್ತು ಪ್ರೊ. ಸುಧೀರ್ ಕೆ.ವಿ. ಹಾಗೂ ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.