ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಳೆಯ ನೀರಿನ ಸಂಗ್ರಹಣೆಯ ಕುರಿತ ಕಾರ್ಯಾಗಾರ

0

ಸುಳ್ಯ ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುಸ್ಥಿರ ನೀರಿನ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ “ಮಳೆಯ ನೀರಿನ ಸಂಗ್ರಹಣಾ ವ್ಯವಸ್ಥೆಯ ವಿನ್ಯಾಸ ಮತ್ತು ಅನುಸ್ಥಾಪನೆ” ಎಂಬ ವಿಷಯದ ಬಗ್ಗೆ ಕಾರ್ಯಾಗಾರವು ಮೇ.13 ರಂದು ನಡೆಯಿತು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಲ್ಲಿಕಾರ್ಜುನ ಎಂಜಿನಿಯರಿಂಗ್ ಅಂಡ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ಮಾಲೀಕರು ಹಾಗೂ ಸಾರ್ವಜನಿಕ ನಿರ್ಮಾಣ ಇಲಾಖೆಯ (PWD) ಗುತ್ತಿಗೆದಾರರಾದ ಎಂಜಿನಿಯರ್ ಗೌತಮ್ ಕೆ.ಎಸ್.ರವರು ಮಳೆಯ ನೀರನ್ನು ಹಳೆಯ ಹಾಗೂ ಹೊಸ ಕಟ್ಟಡಗಳಲ್ಲಿ ಸಂಗ್ರಹಿಸಲು ಮಾಡುವ ವಿನ್ಯಾಸದ ತಂತ್ರಗಳು, ಜೊತೆಗೆ ಆಟೋಕ್ಯಾಡ್ (AutoCAD) ತಂತ್ರಾಂಶದ ಬಳಕೆಯ ಮೂಲಕ ವಿನ್ಯಾಸ ಮಾಡುವ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ನೈಜ ತಿಳಿವಳಿಕೆಯನ್ನು ನೀಡಿದರು.

ಈ ಕಾರ್ಯಾಗಾರವನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ಎನ್ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು. ಸಿಎಸ್, ಎಐಎಂಎಲ್ (ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್), ಮತ್ತು ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಾ. ಸುರೇಶ ವಿ (ಮುಖ್ಯಾಚಾರ್ಯರು), ಡಾ. ಉಜ್ವಲ್ ಯು ಜೆ (ಸಿಇಒ), ಡಾ. ಚಂದ್ರಶೇಖರ ಎ (ಸಿವಿಲ್ ವಿಭಾಗದ ವಿಭಾಗಾಧ್ಯಕ್ಷರು), ಡಾ. ಸವಿತಾ ಸಿ.ಕೆ. (ಸಿ.ಎಸ್.ಇ – ಎಐಎಂಎಲ್ ವಿಭಾಗದ ವಿಭಾಗಾಧ್ಯಕ್ಷರು), ಡಾ. ಲೇಖಾ ಬಿ ಎಂ, ಪ್ರೊ. ಅರುಣ್ ಕುಮಾರ್ ಎಚ್, ಪ್ರೊ. ಅಜಿತ್ ಬಿ ಟಿ, ಮತ್ತು ಪ್ರೊ. ಅಶ್ವಿಜ ಕೆ.ಸಿ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ನೀರಿನ ನಿರ್ವಹಣಾ ತಂತ್ರಜ್ಞಾನಗಳ ಕುರಿತು ನೈಜ ಅನುಭವ ಮತ್ತು ಪರಿಣಿತಿಯ ಜ್ಞಾನ ನೀಡಿದ ಪರಿಣಾಮಕಾರಿಯಾದ ಸೆಷನ್ ಆಗಿ ಗುರುತಿಸಿತು.