ಬಳ್ಪ ಗ್ರಾ.ಪಂ. ವ್ಯಾಪ್ತಿಯ ಬಳ್ಪ ಮತ್ತು ಕೇನ್ಯ ಪರಿಸರದ ಎಸ್.ಎಸ್.ಎಲ್.ಸಿ. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮೇ. 14ರಂದು ನಡೆಯಿತು.


ಎಸ್.ಎಸ್.ಎಲ್.ಸಿ. ಸಾಧಕರಾದ ಆಕಾಶ್ ಎ.ಎಲ್, ಚಿಂತನ್ ಕೆ.ಆರ್, ನಕಾಶ ಎಣ್ಣೆಮಜಲು, ಯೋಗಿತಾ ಕಾರ್ಜ, ವರ್ಷಾ ಸಂಪ್ಯಾಡಿ, ತೇಜಸ್ ಕಣ್ಕಲ್, ಯಜ್ಞೇಶ್ ಎಣ್ಣೆಮಜಲು, ನಿಶಾಂತ್ ನಾಳ, ಚೈತ್ರೇಶ್ ಉಕ್ಕಿನಮನೆ, ಮಹಾನ್ ನಾಳ ಕಾಂಜಿ, ಪ್ರಸಾದ್ ಕೆ.ಜಿ ಕುಂಬ್ರ ಇವರನ್ನು ಸನ್ಮಾನಿಸಲಾಯಿತು. ಪಂಜ ಸಿ.ಎ. ಬ್ಯಾಂಕ್ ನಿರ್ದೇಶಕರಾದ
ಸುಬ್ರಹ್ಮಣ್ಯ ಕುಳ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯ.ಸ. ಮಾಜಿ ಅಧ್ಯಕ್ಷರು ಹಾಗೂ ಕುಮನಮಾಳ್ಯ ದೈವಸ್ಥಾನದ ಟ್ರಸ್ಟಿನ ಅಧ್ಯಕ್ಷರು ಆಗಿರುವ
ಪದ್ಮನಾಭ ರೈ ಆಗೊಳಿಬೈಲು, ನೇಮೋತ್ಸವ ಸಮಿತಿ ಅಧ್ಯಕ್ಷರಾದ
ಹೊನ್ನಪ್ಪ ಎಣ್ಣೆಮಜಲು,
ವಿಜಯ್ ಕುಮಾರ್ ಕಾಂಜಿ, ತೀರ್ಥೆಶ್ವರ ಆಲ್ಕಬೆ, ಹರೀಶ್ ಕಾಂಜಿ, ವಿನೋದ್ ನಡುಮನೆ, ಕುಸುಮಾಧರ ನಡುಮನೆ, ಮಹೇಶ್ ಸುಂತಾರು, ಗಣೇಶ್ ಕೊಠಾರಿ, ಪುಟ್ಟಣ್ಣ ದೊಡ್ಡಮನೆ, ಭಾಸ್ಕರ ಕೊರಪ್ಪಣೆ, ಶಿವಪ್ರಸಾದ್ ಕೊಠಾರಿ, ಧರ್ಮಪಾಲ ಸಂಪ್ಯಾಡಿ, ಚಂದ್ರಶೇಖರ ಕುಲ್ಯಾರ,ಪುಟ್ಟಣ್ಣ ನಾಳ,
ಶಶಿಕಲಾ ಸುಂತಾರು,
ವನಜಾಕ್ಷಿ ಬೀದಿಗುಡ್ಡೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
