ಜಾಲ್ಸೂರು: ಕೆಮನಬಳ್ಳಿ ಪರಿಸರದಲ್ಲಿ ಆನೆ ದಾಳಿ- ಕೃಷಿ ಹಾನಿ

0

ಜಾಲ್ಸೂರು ಗ್ರಾಮದ ಕೆಮನಬಳ್ಳಿ ಪರಿಸರದಲ್ಲಿ ಒಂಟಿ ಸಲಗವೊಂದು ಮೇ. 13 ಮತ್ತು 14ರ ರಾತ್ರಿ ತೋಟಗಳಿಗೆ ನುಗ್ಗಿ ಅಪಾರ ಕೃಷಿ ಬೆಳೆಯನ್ನು ನಾಶಪಡಿಸಿದ ಬಗ್ಗೆ ವರದಿಯಾಗಿದೆ.


ಕೆಮನಬಳ್ಳಿ ಮುರಳೀಧರರವರ ತೋಟಕ್ಕೆ ದಾಳಿ ನಡೆಸಿದ ಅನೆ ಸುಮಾರು 15 ಅಡಿಕೆ ಮರಗಳು , ತೆಂಗು ಹಾಗೂ ಬಾಳೆಗಿಡಗಳನ್ನು ಪುಡಿಗೈದು ಹಾನಿಯುಂಟು ಮಾಡಿದೆ ಎಂದು ತಿಳಿದು ಬಂದಿದೆ. ಕೆಲವು ತಿಂಗಳುಗಳಿಂದ ಜಾಲ್ಸೂರು ಕನಕಮಜಲು ಪರಿಸರದಲ್ಲಿ ಆನೆಗಳ ಉಪಟಳ ಜಾಸ್ತಿಯಾಗಿದ್ದು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಿ ಕೃಷಿ ಹಾನಿಯನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.