Home Uncategorized ಸುಳ್ಯ ಮೆಸ್ಕಾಂ ಉಪವಿಭಾಗಕ್ಕೆ ಪ್ರಶಂಸನೆ

ಸುಳ್ಯ ಮೆಸ್ಕಾಂ ಉಪವಿಭಾಗಕ್ಕೆ ಪ್ರಶಂಸನೆ

0

ಕಂದಾಯ ವಸೂಲಾತಿಯಲ್ಲಿ ಅತ್ಯುತ್ತಮ ಸಾಧನೆ

24-25 ನೇ ಆರ್ಥಿಕ ವರ್ಷದ ಪುತ್ತೂರು ವಿಭಾಗ ಮಟ್ಟದ ಕಂದಾಯ (ತೆರಿಗೆ) ವಸೂಲಾತಿಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಸುಳ್ಯ ಉಪವಿಭಾಗವನ್ನು ಮಂಗಳೂರು ವೃತ್ತದ ಉಪ ಲೆಕ್ಕ ನಿಯಂತ್ರಣ ಅಧಿಕಾರಿ ಮತ್ತು ವಿಭಾಗದ ಲೆಕ್ಕಧಿಕಾರಿ ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ವೃತ್ತದ ಉಪ ಲೆಕ್ಕ ನಿಯಂತ್ರಣ ಅಧಿಕಾರಿ ಪುಷ್ಪರಾಜ್ ಮತ್ತು ಪುತ್ತೂರು ವಿಭಾಗದ ಲೆಕ್ಕಧಿಕಾರಿ ನಾರಾಯಣ ಶೇನೋಯ್ ಸುಳ್ಯ ಉಪವಿಭಾಗ ಕಚೇರಿಗೆ ಭೇಟಿ ನೀಡಿದರು. ತೆರಿಗೆ ವಸೂಲಾತಿಯಲ್ಲಿ ಉಪವಿಭಾಗವು ತೋರಿಸಿದ ಅಸಾಧಾರಣ ಸಾಧನೆಗೆ ಪ್ರಶಂಸೆ ಸೂಚಿಸಿ, ಅಧಿಕಾರಿಗಳು ಮತ್ತು ನೌಕರರಿಗೆ ಪ್ರಶಂಸನ ಪತ್ರವನ್ನು ಹಂಚಿದರು.

ಸುಳ್ಯ ಉಪವಿಭಾಗವು ಪುತ್ತೂರು ವಿಭಾಗದೊಳಗೆ ಅತ್ಯಧಿಕ ಕಂದಾಯ ವಸೂಲಾತಿ ಮಾಡಿ ವಿಭಾಗೀಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದೆ. ಇದರ ಹಿಂದೆ ಉಪವಿಭಾಗದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸ್ಥಳೀಯ ಜನತೆಯ ಸಹಕಾರ ಕಾರಣವೆಂದು ಹೇಳಿದ ಅಧಿಕಾರಿಗಳು, “ಸರ್ಕಾರಿ ಯೋಜನೆಗಳು ಸಾಧಕವಾಗಲು ಸಮರ್ಪಿತ ಸಿಬ್ಬಂದಿಯ ಪ್ರಯತ್ನ ಅತ್ಯಗತ್ಯ. ಸುಳ್ಯ ತಂಡದ ಸಾಧನೆ ಮಾದರಿ” ಎಂದು ಪ್ರಶಂಸಿಸಿದರು.

ಈ ಕಾರ್ಯಕ್ರಮದಲ್ಲಿ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿರುವ ಹರೀಶ್ k ನಾಯ್ಕ್ ಅವರ ನೇತೃತ್ವದ ಅಧಿಕಾರಿ ವರ್ಗದವರಾದ ಸಹಾಯಕ ಇಂಜಿನಿಯರ್ ಸುಪ್ರೀತ್ ಕುಮಾರ್, ಸಹಾಯಕ ಲೆಕ್ಕಧಿಕಾರಿ ಆಗಿರುವ ಪ್ರಸಿಲ ಕ್ರೆಷ್ಟಾ, ಕಿರಿಯ ಇಂಜಿನಿಯರ್ ಗಳಾಗಿವುರ ಅಭಿಷೇಕ್ ಎ ಸಿ, ಮಹೇಶ್ ಕೆ, ದಿವ್ಯ, ಉಷಾ ಕುಮಾರಿ, ಉಪಸ್ಥಿತರಿದ್ದರು.

NO COMMENTS

error: Content is protected !!
Breaking