ದುಗ್ಗಲಡ್ಕದ ಕೊಯಿಕುಳಿ ಶ್ರೀ ಕೃಷ್ಣ ಮಂದಿರದಲ್ಲಿ ಭಜನಾ ತರಬೇತಿ ಮೇ.11ರಿಂದ ಆರಂಭಗೊಂಡಿದ್ದು, ಇದರ ಉದ್ಘಾಟನೆಯನ್ನು ಸೇವಾ ಸಮಿತಿ ಅಧ್ಯಕ್ಷ ಶಶಿಧರ ಎಂ. ಜೆ.ನೆರವೇರಿಸಿದರು.

ಈ ಸಂದರ್ಭದಲ್ಲಿ ಭಜನಾ ತರಬೇತುದಾರರಾದ ಧನಂಜಯ ಕುಮಾರ್ ರೆಂಜ, ಸೇವಾ ಸಮಿತಿಯ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕೋಶಾಧಿಕಾರಿ ಭಾಸ್ಕರ ಪೂಜಾರಿ ಬಾಜಿನಡ್ಕ, ಧನಂಜಯ ಕಲ್ಮಡ್ಕ, ಹೇಮಂತ್ ಕಲ್ಮಡ್ಕ, ಅಭಿಷೇಕ್ ದುಗ್ಗಲಡ್ಕ ಮತ್ತು ಮೊದಲಾದವರು ಉಪಸ್ಥಿತರಿದ್ದರು.
ತರಬೇತಿಯು ಪ್ರತಿ ಆದಿತ್ಯವಾರ ಅಪರಾಹ್ನ 2.30ರಿಂದ 4.30 ಗಂಟೆಯ ವರೆಗೆ ಮಂದಿರದಲ್ಲಿ ನಡೆಯಲಿದ್ದು, ಆಸಕ್ತ ಮಕ್ಕಳು, ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದೆಂದು ಸೇವಾ ಸಮಿತಿಯವರು ತಿಳಿಸಿದ್ದಾರೆ.