ತೊಡಿಕಾನ ಪಾಷಾಣಮೂರ್ತಿ ಅಮ್ಮನವರ ಕ್ಷೇತ್ರದಲ್ಲಿ ಹರಕೆ ಸಮ್ಮಾನ ಮೇ 14 ರಂದು ನಡೆಯಿತು.

ಈ ಬಾರಿ ದೇವಸ್ಥಾನದ ಆಡಳಿತ ಮಂಡಳಿಯವರು ಭಕ್ತರ ಅನುಕೂಲಕ್ಕಾಗಿ ಹಲವು ಬದಲಾವಣೆಗಳನ್ನು ಮಾಡಿದ್ದು, ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ಸೇವೆ ಹಾಗೂ ಭಕ್ತರು ಭಾಗವಹಿಸಿದ್ದರು.

ಕೋಳಿ ಸಹಿತ, ಹರಕೆ ಸಾಮಾಗ್ರಿ ದೇವಸ್ಥಾನದ ವತಿಯಿಂದಲೇ ಕೌಂಟರ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಬೆಳಿಗ್ಗೆ 8.30 ಕ್ಕೆ ಬಂದು ಕೌಂಟರ್ ನಿಂದ ಕೋಳಿ ಪಡೆದು ಹೆಸರು ನೋಂದಾಯಿಸಿ ಮನೆಗೆ ತೆರಳಬಹುದಾಗಿತ್ತು. ಸಂಜೆ ಪ್ರಾರ್ಥನೆ ನಡೆಯುವ ವೇಳೆಗೆ ಬಂದು ಪ್ರಸಾದ ಸ್ವೀಕರಿಸಿದರು.

ಹರಕೆಗೆ ಸಂಬಂಧಪಟ್ಟ ಎಲ್ಲಾ ಕೆಲಸ ಕಾರ್ಯ ದೇವಸ್ಥಾನ ವತಿಯಿಂದ ನಡೆದು, ಉಬರಡ್ಕದ ವಿನಯ ಮತ್ತು ತಂಡದವರಿಗೆ ಅಡುಗೆಯ ಜವಾಬ್ದಾರಿ ನೀಡಲಾಗಿತ್ತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಸದಸ್ಯರಾದ ಕೆ. ಕೆ. ಬಾಲಕೃಷ್ಣ, ತಿಮ್ಮಯ್ಯ ಮೆತ್ತಡ್ಕ, ತೀರ್ಥರಾಮ ಪರ್ನೋಜಿ, ಸತ್ಯಪ್ರಸಾದ್ ಗಬ್ಬಲ್ಕಜೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಮಾಜಿ ಸದಸ್ಯರಾದ ಕೆ. ಕೆ. ನಾರಾಯಣ, ಉಮಾಶಂಕರ್ ಅಡ್ಯಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಸದಸ್ಯ ರವೀಂದ್ರ ಪಂಜಿಕೋಡಿ, ದೇವಸ್ಥಾನದ ಮೆನೇಜರ್ ಆನಂದ ಕಲ್ಲಗದ್ದೆ, ಹಾಗೂ ದೇವಸ್ಥಾನದ ಸಿಬ್ಬಂದಿಗಳು ನೇತೃತ್ವ ವಹಿಸಿದ್ದರು.
ಸಂಜೆ ಪ್ರಾರ್ಥನೆ ಹಾಗೂ ಹರಕೆ ಸಮ್ಮಾನ ವೇಳೆ ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
