ಆಲೆಟ್ಟಿಯಿಂದ ಸುಳ್ಯ ಕಡೆಗೆ ಬರುವ ರಸ್ತೆಯ ನಾರ್ಕೋಡು ದ್ವಾರದ ಬಳಿ ಬೈಕೊಂದಕ್ಕೆ ಸ್ಕೂಟಿ ಡಿಕ್ಕಿ ಹೊಡೆದ ಘಟನೆ ಮೇ.14 ರಂದು ರಾತ್ರಿ ಸಂಭವಿಸಿದೆ.

ಆಲೆಟ್ಟಿ ಕಡೆಯಿಂದ ಕೇಬಲ್ ನೆಟ್ ವರ್ಕ್ ಕೆಲಸ ಮುಗಿಸಿ ಸುಳ್ಯಕ್ಕೆ ಬರುತ್ತಿದ್ದ ಅರಂಬೂರಿನ ಸುಧಾಕರ ರೈ ಎಂಬವರ ಬೈಕಿಗೆ ನಾರ್ಕೋಡು ದ್ವಾರದ ಬಳಿ ಜಂಕ್ಷನ್ ನಲ್ಲಿ ಸುಳ್ಯದಿಂದ ಕೋಲ್ಚಾರು ಮಾರ್ಗವಾಗಿ ಬಂದಡ್ಕ ಕಡೆಗೆ ಹೋಗುತ್ತಿದ್ದ ಸ್ಕೂಟಿ ಸವಾರ ನೇರವಾಗಿ ಬಂದು ಬೈಕಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿರುತ್ತಾರೆ. ಪರಿಣಾಮವಾಗಿ ಬೈಕ್ ಸವಾರ ಸುಧಾಕರ ರವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡರು. ತಲೆಗೆ ಮತ್ತು ಕುತ್ತಿಗೆಯ ಭಾಗಕ್ಕೆ ಗಾಯಗೊಂಡ ಸುಧಾಕರ ರವರನ್ನು ಮತ್ತು ಸ್ಕೂಟಿ ಸವಾರರನ್ನು ಅದೇ ರಸ್ತೆಯಲ್ಲಿ ಬರುತ್ತಿದ್ದ ಪ್ರವೀಣ್ ಆಲೆಟ್ಟಿ ಯವರು ತಮ್ಮ ಜೀಪಿನಲ್ಲಿ ಕರೆದುಕೊಂಡು ಬಂದು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿದರು.
ವೈದ್ಯರು ಪರೀಕ್ಷಿಸಿ
ಚಿಕಿತ್ಸೆ ನೀಡಿದ ಬಳಿಕ ಬೈಕ್ ಸವಾರ ಚೇತರಿಸಿಕೊಂಡಿದ್ದು ಅವರನ್ನು ರಾತ್ರಿಯೇ ಮನೆಗೆ ಕಳುಹಿಸಲಾಗಿದೆ.

ಬೈಕಿನಲ್ಲಿದ್ದ ಸಹ ಸವಾರ ರೋಶನ್ ಮತ್ತು ಸ್ಕೂಟಿ ಸವಾರ ಅಲ್ಪ ಸ್ವಲ್ಪ ಗಾಯಗೊಂಡಿರುವು ವುದಾಗಿ ತಿಳಿದು ಬಂದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಮತ್ತು ಸ್ಕೂಟಿ ಜಖಂಗೊಂಡಿದೆ.