ಅವಿರೋಧ ಆಯ್ಕೆ ಖಚಿತ

ಸುಬ್ರಹ್ಮಣ್ಯ ಗ್ರಾ.ಪಂ ನ ತರವಾದ ಐನೆಕಿದು ವಾರ್ಡ್ ಗೆ ಒಂದು ಸ್ಥಾನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಬಿಜೆಪಿಯ ಶ್ರೀಮತಿ ಮೋಹಿನಿ ಶ್ರೀಧರ ಅಂಙಣ ನಿನ್ನೆ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆ ಖಚಿತವಾಗಿದೆ.
ಕಾಂಗ್ರೆಸ್ ಪಕ್ಷವಾಗಲಿ, ಬೇರೆ ಯಾರೇ ನಾಮಪತ್ರ ಸಲ್ಲಿಸಲಿಲ್ಲ. ನಿನ್ನೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು ಮೋಹಿನಿ ಅವರ ಆಯ್ಕೆ ಖಚಿತವಾಗಿದೆ. ಮೇ.15 ರಂದು ನಾಮಪತ್ರ ಪರಿಶೀಲನೆ ನಡೆದ ಬಳಿಕ ಈ ಬಗ್ಗೆ ಖಾತ್ರಿ ದೊರೆಯಲಿದೆ.