
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಾಧೀಶರಾದ ಅರವಿಂದ್ ರವರು ಮೇ.15 ರಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ವ್ಯ.ಸ.ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಬೆಳ್ಳಾರೆ ಠಾಣಾ ಎಸ್.ಐ.ಈರಯ್ಯ ದೂಂತೂರು ,ದೇವಸ್ಥಾನದ ಕಚೇರಿ ನಿರ್ವಾಹಕ ವಸಂತ ಆಚಾರ್ಯ,ನೇಮು ಪರವ,ಅಶ್ವತ್ ಕುಲಾಲ್ ನೆಟ್ಟಾರು,ದೀಪಕ್ ಶೆಟ್ಟಿ ಪೆರುವಾಜೆ ಮತ್ತಿತರರು ಉಪಸ್ಥಿತರಿದ್ದರು.