ಐವರ್ನಾಡು : ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

0

ಐವರ್ನಾಡು ಗ್ರಾಮ ಪಂಚಾಯತ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಐವರ್ನಾಡು ಗ್ರಾಮ ಪಂಚಾಯತ್. ಇದರ ಸಂಯುಕ್ತ ಆಶ್ರಯ ದಲ್ಲಿ ನಡೆಸಿದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಮೇ.12 ರಂದು ನಡೆಯಿತು. ಪಂಚಾಯತ್ ಅಧ್ಯಕ್ಷರು ಮಾತನಾಡಿ ಬೇಸಿಗೆ ಶಿಬಿರದಲ್ಲಿ ತಿಳಿಯದೇ ಇರುವಂತ ವಿಷಯಗಳನ್ನು ಹಾಗೂ ಮಾಹಿತಿ ಗಳನ್ನು ಪಡೆದುಕೊಂಡಿದ್ದೀರಿ. ಇದನ್ನು ನಿಮ್ಮ ಜೇವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ರವರು ನಿಮ್ಮಲ್ಲಿರುವ ಪ್ರತಿಭೆ ಗಳನ್ನು ತೋರ್ಪಡಿಸಲು ಒಂದು ಒಳ್ಳೆಯ ಅವಕಾಶ ಇಂಥ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ವೀರಪ್ಪ ಮಾಸ್ತರ್ ಮೊಟ್ಟೆ ಮಾತನಾಡಿ ಬೇಸಿಗೆ ರಜೆಯಲ್ಲಿ ಇಂಥ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನ ಕ್ಕೆ ಪೂರಕ ವಾಗಿದೆ. ಉತ್ತಮ ಜ್ಞಾನ ಸಂಪಾದನೆ ಯಾಗುವುದು. ಎಂದರು.

ಪಂಚಾಯತ್ ಸದಸ್ಯರಾದ ಸುಜಾತ ಪವಿತ್ರ ಮಜಲು ರವರು ಮಕ್ಕಳು ಬೇಸಿಗೆ ರಜೆ ಯನ್ನು ಮನರಂಜನೆ ಯಾಗಿ ಕಲಿಯಲಿ. ಮಕ್ಕಳಲ್ಲಿರುವ ಪ್ರತಿಭೆ ಗಳನ್ನು ಹೊರಹಾಕಲು ಇದು ಒಂದು ಅವಕಾಶ. ಒಳ್ಳೆಯ ವಿಷಯ ಗಳನ್ನು ಶಿಬಿರ ದಿಂದ ಕಲಿತು ಕೊಡಿದ್ದೀರಿ. ಎಂದರು. ಶಿಬಿರದ ಲ್ಲಿ ಕಲಿತ ವಿಷಯ ಗಳು ಮತ್ತು ಅವರಿಗಾದ ಅನುಭವ ವನ್ನು ಅನಿಸಿಕೆ ಯ ಮೂಲಕ ಮಕ್ಕಳು ಹೇಳಿದರು. ಕಥೆ, ಹಾಡು ಮತ್ತು ಡ್ಯಾನ್ಸ್ ಮಾಡಿದರು. ಶಿಬಿರದ ಸಮಾರೋಪದಲ್ಲಿ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.ಕಾರ್ಯಕ್ರಮವನ್ನು ಶಿಬಿರಾರ್ಥಿಯವರಾದ ಗ್ರೀಷ್ಮ, ತೃಷಾ, ಅದಿತಿ ಯವರ ಪ್ರಾರ್ಥನೆ ಯೊಂದಿಗೆ, ಮಾನ್ವಿ ಯವರು ಸ್ವಾಗತಿಸಿ ಸಾನ್ವಿ ಯವರು ನಿರೂಪಿಸಿ. ನಿಧಿಶ್ರೀ ವಂದಿಸಿದರು.

ಗ್ರಂಥಾಲಯ ಮೇಲ್ವಿಚಾರಕರು ಶಿಬಿರಕ್ಕೆ ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿದರು. ಕಾರ್ಯಕ್ರಮ ದಲ್ಲಿ ನಿವೃತ್ತ ಮುಖ್ಯ್ಯೋ ಪಾಧ್ಯಾಯರು, ಪಂಚಾಯತ್ ಸದಸ್ಯರು ಹಾಗೂ ಗ್ರಂಥಾಲಯ ಮೇಲ್ವಿಚಾರಕರು ಹಾಗೂ ಶಿಬಿರಾರ್ಥಿಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.