ಜಾಲ್ಸೂರು ಪರಿಸರದಲ್ಲಿ ಕಾಡಾನೆ ಉಪಟಳ – ಕೃಷಿ ಹಾನಿ

0

ಜಾಲ್ಸೂರು – ಸೊಣಂಗೇರಿ ರಸ್ತೆಯ ಅರಿಯಡ್ಕನ.ಸೀತಾರಾಮ ರ ತೋಟಕ್ಕೆ ನಿನ್ನೆ ತಡರಾತ್ರಿ ಕಾಡಾನೆಯೊಂದು ದಾಳಿ ಮಾಡಿ ತೋಟದ ಕಾಂಪೌಂಡ್ ಗೆ ಹಾನಿ ಮಾಡಿ.ತೋಟದಲ್ಲಿನ ಮರವನ್ನು ಮುರಿದು ಹಾಕಿದೆ.

ಈ ಹಿಂದೆ ಕನಕಮಜಲು,ಪೆರ್ಲಂಪಾಡಿ ಯಲ್ಲಿ ವ್ಯಾಪಕವಾಗಿ ಕೃಷಿ ಹಾನಿ ನಡೆಸಿದ ಆನೆ ಇದೀಗ ಜಾಲ್ಸೂರ್ ಪರಿಸರದಲ್ಲಿ ಕಂಡುಬಂದಿದ್ದು ಕೃಷಿಕರು ಭಯಭೀತರಾಗಿದ್ದಾರೆ ಅರಣ್ಯ ಇಲಾಖೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.