Home ಕ್ರೈಂ ನ್ಯೂಸ್ ಬಸ್ ನಲ್ಲಿ ಬಾಲಕಿಯೊಂದಿಗೆ ಅನುಚಿತ ವರ್ತನೆ : ಆರೋಪಿ ಅಬ್ದುಲ್ ಕುಂಞಿ ಯನ್ನು ವಶಕ್ಕೆ ಪಡೆದ...

ಬಸ್ ನಲ್ಲಿ ಬಾಲಕಿಯೊಂದಿಗೆ ಅನುಚಿತ ವರ್ತನೆ : ಆರೋಪಿ ಅಬ್ದುಲ್ ಕುಂಞಿ ಯನ್ನು ವಶಕ್ಕೆ ಪಡೆದ ಪೋಲೀಸರು

0

ಪುತ್ತೂರಿನಿಂದ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದ ಬಾಲಕಿಯೊಂದಿಗೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಅನುಚಿತವಾಗಿ ವರ್ತಿಸಿದ ಹಾಗೂ ಬಸ್ ನಲ್ಲಿದ್ದವರು ಆರೋಪಿಯನ್ನು ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ವರದಿಯಾಗಿದೆ.

ಸೋಮವಾರಪೇಟೆಯ ಕುಟುಂಬವೊಂದು ಪುತ್ತೂರು ಬಸ್ ನಲ್ಲಿ ಮಡಿಕೇರಿ ಕಡೆಗೆ ಪ್ರಯಾಣಿಸುತ್ತಿದ್ದಾಗ, ಪುತ್ತೂರಿನಲ್ಲಿ ಬಸ್ ಏರಿದ ಪಾಣಾಜೆಯ ಅಬ್ದುಲ್ ಕುಂಞಿ ಎಂಬವರು ಬಸ್ ನಲ್ಲಿದ್ದ ಸೋಮವಾರಪೇಟೆಯ ಬಾಲಕಿಯ ಮೈ ಮುಟ್ಟಿದನೆನ್ನಲಾಗಿದೆ. ಇದನ್ನು‌ಬಾಲಕಿ ಆಕ್ಷೇಪಿಸಿ ಬಸ್ ನಲ್ಲಿದ್ದ ತನ್ನ ಮನೆಯವರಿಗೆ ತಿಳಿಸಿದರು. ಆ ವ್ಯಕ್ತಿ ಬಾಲಕಿಯೊಂದಿಗೆ ಅನುಚಿತ ವಾಗಿ ವರ್ತಿಸಿದ್ದನ್ನು‌ಬಸ್ ನಲ್ಲಿಧ್ದವರು ನೋಡಿದ್ದರೆಂದು ಬಳಿಕ ಆತನನ್ನು ಹಿಡಿದುಕೊಂಡು ಪೋಲೀಸರಿಗೆ ಮಾಹಿತಿ ನೀಡಿದರು. ಇದೀಗ ಅಬ್ದುಲ್ ಕುಂಞಿಯನ್ನು ವಶಕ್ಕೆ ಪಡೆದಿರುವ ಸುಳ್ಯ ಪೋಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

NO COMMENTS

error: Content is protected !!
Breaking