ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ ಕನ್ವರ್ಷನ್, ಸೂಡ ವಿನ್ಯಾಸ ಅನುಮೋದನೆ, ಪರವಾನಿಗೆ ರಹಿತ ಕಟ್ಟಡ ಮೊದಲಾದ ಸಮಸ್ಯೆಗಳಿಂದ ಖಾತೆ ಫಾರಂ 3 ನೀಡಲು ಬಾಕಿಯಿರುವ ಕಟ್ಟಡ, ನಿವೇಶನಗಳಿಗೆ ಖಾತೆ ನೀಡುವ ಮಹತ್ವಕಾಂಕ್ಷಿ ಯೋಜನೆ ಕರ್ನಾಟಕ ಸರ್ಕಾರ ಜಾರಿ ಗೊಳಿಸಿ ಮೇ 10 ಕೊನೆಯ ದಿನಾಂಕ ಎಂದು ಪ್ರಕಟಿಸಿತ್ತು.

ಆದರೆ ತಂತ್ರಾoಶ, ಇಸಿ ವಿಳಂಬ ಸಮಸ್ಯೆ ಯಿಂದಾಗಿ ಎಲ್ಲರಿಗೂ ಸಕಾಲ ದಲ್ಲಿ ಅರ್ಜಿ ಕೊಡುವುದು ಸಾಧ್ಯ ವಾಗಲಿಲ್ಲ ವಾದರಿಂದ 3 ತಿಂಗಳು ವಿಸ್ತರಿಸುವಂತೆ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವರಿಗೆ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಬೆಂಗಳೂರಿನಲ್ಲಿ ಭೇಟಿಯಾಗಿ ಅರ್ಜಿ ಮನವಿ ಸಲ್ಲಿಸಿದ್ದರು.
ಇದೀಗ ಅವಧಿ ವಿಸ್ತರಣೆ ಮಾಡಿ ಆದೇಶ ನೀಡಿರುವುದಕ್ಕೆ ಕೆ. ಎಂ. ಮುಸ್ತಫ ಕೃತಜ್ಞತೆ ಸಲ್ಲಿಸಿರುತ್ತಾರೆ