ಕೊಲ್ಲಮೊಗ್ರಕ್ಕೊಂದು ಎಟಿಎಂ ಬೇಕಾಗಿದೆ

0

ಬ್ಯಾಂಕ್ ಆಫ್ ಬರೋಡ ಶಾಖೆಯೊಂದು ಕೊಲ್ಲಮೊಗ್ರದಲ್ಲಿ. ಕಾರ್ಯಾಚರಿಸುತ್ತಿದ್ದು, ಈ ಶಾಖೆಯು ಹರಿಹರ ಪಲ್ಲತಡ್ಕ ಕೊಡಗು ಗಡಿಭಾಗ ಕಲ್ಮಕಾರು ಕೊಲ್ಲಮೊಗರು ಸೇರಿದಂತೆ ಇನ್ನಿತರ ಗ್ರಾಮದ ಜನರಿಗೆ ಈ ಶಾಖೆ ಪ್ರಮುಖವಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಈ ಶಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಗ್ರಾಹಕರು ವ್ಯವಹಾರಗಳಿಗಾಗಿ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣ ಪಡೆಯುವುದು ಮತ್ತು ಖಾತೆಗೆ ಜಮಾವಣೆ ಮಾಡುವುದು ತುಂಬಾ ತ್ರಾಸದಾಯಕ. ಸಿಬ್ಬಂದಿಗಳ ಕೊರತೆಯಿಂದಾಗಿ ತಮ್ಮ ಖಾತೆಯಿಂದ ಹಣ ಪಡೆಯುವುದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆಗುತ್ತದೆ. ಇದಕ್ಕಾಗಿ ಆ ಭಾಗದ ಗ್ರಾಹಕರ ಅನುಕೂಲತೆಗಾಗಿ ಒಂದು ಎಟಿಎಂ ಮಿಷನ್ ಅಳವಡಿಸುವಂತೆ ಗ್ರಾಹಕರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಅತಿ ಅಗತ್ಯವಾಗಿ ಗಮನ ಹರಿಸಬೇಕಾಗಿದೆ.(ಚಿತ್ರ ವರದಿ: ಡಿ ಹೆಚ್.)