ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹಿತ ಗಣ್ಯರ ಆಗಮನ : ಪ್ರಸಾದ ಸ್ವೀಕಾರ
ಸಂಸದ ಕ್ಯಾ.ಬ್ರಿಜೇಶ್ ಚೌಟರ ಮೂಲಕ ಪ್ರಧಾನಿಯವರಿಗೆ ಕರಿಗಂಧ ಪ್ರಸಾದ

ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿಗೆ ದೇಶದ ಚುಕ್ಕಾಣಿ ಹಿಡಿಯಬೇಕೆಂದು ಜಯನಗರ ಬೂತ್ ಸಮಿತಿಯವರು ಹರಕೆ ಹೇಳಿಕೊಂಡ ಪ್ರಕಾರ ಇಂದು ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರು ಈ ನೇಮೋತ್ಸವಕ್ಕೆ ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು.


ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವ ಎಸ್.ಅಂಗಾರ ಸಹಿತ ಹಲವು ಗಣ್ಯರು ಈ ಸಂದರ್ಭದಲ್ಲಿದ್ದು ಪ್ರಸಾದ ಸ್ವೀಕರಿಸಿದರು.
ದೈವಸ್ಥಾನದ ಪ್ರಮುಖರಾದ ಕೇಶವ ಮಾಸ್ತರ್ ಹೊಸಗದ್ದೆ, ಜಿ.ಜಗನ್ನಾಥ ಜಯನಗರ, ನಗರ ಬಿಜೆಪಿ ಅಧ್ಯಕ್ಷ ಎ.ಟಿ. ಕುಸುಮಾಧರ, ಬೂತ್ ಸಮಿತಿಯವರಿದ್ದು ಅತಿಥಿಗಳನ್ನು ಬರಮಾಡಿಕೊಂಡರು.