ಹರೀಶ್ ಇಂಜಾಡಿಯವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ, ಅಪಪ್ರಚಾರ ಕೈಗೊಂಡರ ವಿರುದ್ದ ಪ್ರತಿಭಟನೆ ಮಾಡುತ್ತೇವೆ

0

ರಾಜಕೀಯ ಪ್ರೇರಿತವಾಗಿ ಉದ್ದೇಶ ಪೂರ್ವಕವಾಗಿ ತೆರೆದ ರೌಡಿ ಶೀಟರ್ ಕೇಸ್, ಮುಗಿದ ವಿಚಾರ

ಕಡಬ ಬ್ಲಾಕ್ ಕಾಂಗ್ರೆಸ್, ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

ಕುಕ್ಕೆ ಶ್ರೀ ಸುಬಹ್ಮಣೇಶ್ವರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹರೀಶ್ ಇಂಚಾಡಿಯವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಹಿಂದೆನೂ ಇತ್ತು, ಮುಂದೆನೂ ಇದೆ. ಅವರ ವಿರುದ್ದ ಷ್ಯಡ್ಯಂತ್ರ, ಅಪ ಪ್ರಚಾರ ಮಾಡಿದರು ಏನೂ ಎಂಬುದು ಗೊತ್ತಿದೆ, ಅಪ ಪ್ರಚಾರ ಮುಂದುವರೆದರೆ ನಾವು ಅಂತವರ ವಿರುದ್ಧ ಪ್ರತಿಭಟನೆ ಮಾಡುತ್ತೇ, ಹೋರಾಟ ಮಾಡಲು ಸಿದ್ದ ಎಂದು
ಕಡಬ ಬ್ಲಾಕ್ ಕಾಂಗ್ರೆಸ್, ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಮೇ.17 ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಇಂತವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬಗ್ಗೆ ಕಡಬ ಬ್ಲಾಕ್ ಗೆ ಮಾಹಿತಿ ನೀಡಿಲ್ಲ. ಹಾಗಿದ್ದರೂ ಈಗ ನಡೆದಿರುವ ಆಯ್ಜೆ ವ್ಯವಸ್ಥಾಪನಾ ಸಮಿತಿಯವರ ಬಹುಮತದ ಆಯ್ಕೆ ನಡೆದಿರುತ್ತದೆ. ಅಲ್ಲದೆ ಸುಬ್ರಹ್ಮಣ್ಯ ದ ಬಗ್ಗೆ ಆಳವಾಗಿ ತಿಳಿದಿರುವವರಿಗೆ ನೀಡಲಾಗಿದೆ.
ರಾಜಕೀಯ ಪ್ರೇರಿತವಾಗಿ ಉದ್ದೇಶ ಪೂರ್ವಕವಾಗಿ ತೆರದ ರೌಡಿ ಶೀಟರ್ ಕೇಸ್, ಮುಗಿದ ವಿಚಾರಗಳು ಎಂದವರು ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿ ಉದ್ದೇಶಿಸಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಕಡಬ ತಾಲೂಕು ಕೆ‌.ಡಿ.ಪಿ ಸದಸ್ಯ ಶಿವರಾಮ ರೈ ಮಾತನಾಡಿದರು.

ಹರೀಶ್ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸತತವಾಗಿ ಮೂರು ಬಾರಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತಿನ ಚುನಾಯಿತ ಸದಸ್ಯರಾಗಿ ಆಯ್ಕೆ ಆಗಿರುತ್ತಾರೆ. ಕಾಂಗ್ರೆಸ್ ಬೆಂಬಲಿತರಾಗಿ ಯಾರು ಕೂಡ ಮೂರು ಬಾರಿ ಸತತವಾಗಿ ಚುನಾಯಿತ ಸದಸ್ಯರಾಗಿಲ್ಲ. ಹ ಸಹಜವಾಗಿಯೇ ದೇವಸ್ಥಾನದ ಅಧ್ಯಕ್ಷ ಪದವಿಗೆ ಅರ್ಹರಾಗಿರುತ್ತಾರೆ.

ಕುಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸದಸ್ಯರು ಮತ್ತು ಅಧ್ಯಕ್ಷರಾಗುವ ಪೂರ್ವದಲ್ಲಿ ಮತ್ತು ನಂತರದಲ್ಲಿ ಇಂಜಾಡಿಯವರ ಹಿತ ಶತ್ರುಗಳು ಇದರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಇವರು ದೇವಸ್ಥಾನದ ಸಮಿತಿ ಸೇರಿಕೊಳ್ಳಬಾರದು ಎಂಬ ದೃಷ್ಟಿಯಿಂದ ಇವರ ವಿರುದ್ಧ ಪಿತೂರಿಯನ್ನು ಮಾಡಿ 20 ವರ್ಷಗಳ ಹಿಂದಿನ ಕೆಲವೊಂದು ಘಟನೆಗಳನ್ನು ಸೃಷ್ಟಿಸಿ ಮಾಧ್ಯಮದಲ್ಲಿ ಹರಿದು ಬಿಡುವ ಪ್ರಯತ್ನವನ್ನು ಮಾಡಿ ಇವರ ವೈಯಕ್ತಿಕ ವರ್ಚಸ್ಸಿಗೆ ಕುಂದು ತರುವ ಪ್ರಯತ್ನವನ್ನು ಮಾಡಿ ತೇಜೋವಧೆಯನ್ನು ಮಾಡಿರುತ್ತಾರೆ. ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸುತ್ತೇವೆ ಮತ್ತು ಇಂಜಾಡಿಯವರಿಗೆ ನೈತಿಕ ಬೆಂಬಲವನ್ನು ನೀಡುತ್ತೇವೆ. ಒಂದು ವೇಳೆ ದೊರಕಿರುವ ಅಧ್ಯಕ್ಷ ಪದವಿಗೆ ಸರಕಾರದ ಕಡೆಯಿಂದ ಅಥವಾ ಇತರರಿಂದ ತೊಂದರೆ ಆದಲ್ಲಿ ಅದರ ವಿರುದ್ಧ ಹೋರಾಡುವರೇ ನಾವು ಸನ್ನದ್ಧರಾಗಿದ್ದೇವೆ ಎಂದಿದ್ದಾರೆ.

ಬಹಳ ವರ್ಷಗಳ ಹಿಂದೆ ಇಂಜಾಡಿಯವರು ದೇವಸ್ಥಾನದ ವತಿಯಿಂದ ನಡೆಸುತ್ತಿದ್ದ ಹಣ್ಣು ಕಾಯಿ ಮತ್ತು ಬೆಳ್ಳಿ ಅಂಗಡಿ ದೇವಸ್ಥಾನದ ರಸ್ತೆ ಬದಿಯಲ್ಲಿ ಇರುತ್ತಿದ್ದು ಆ ಕಾಲದಲ್ಲಿ ದೇವಸ್ಥಾನದ ರಸ್ತೆಗಳು ಬಹಳಷ್ಟು ಕಿರಿದಾಗಿದ್ದು ಪೂಜಾ ಸಾಮಾಗ್ರಿಗಳನ್ನು ಬಹುತೇಕವಾಗಿ ರಸ್ತೆ ಬದಿಯಲ್ಲಿ ಇಡುವ ಕ್ರಮವಿತ್ತು. ಆ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಓರ್ವರು ಇಂಜಾಡಿಯವರ ಅಂಗಡಿಯ ಕೆಲಸಗಾರರನ್ನು ಪ್ರಶ್ನಿಸಿ ಪೂಚಾ ಸಾಮಾಗ್ರಿಗಳನ್ನು ತೆರವುಗೊಳಿಸುವರೇ ಹೇಳಿದಾಗ ಅದಕ್ಕೆ ಸಮ್ಮತಿಸದ ಕೆಲಸಗಾರರಿಗೆ ಹಿಗ್ಗಾ ಮುಗ್ಧವಾಗಿ ಸ್ಥಳದಲ್ಲಿ ಬೈದು ದೇವರಿಗೆ ಅರ್ಪಣೆಗೆ ಇಡಲಾದ ಪೂಜಾ ಸಾಮಾಗ್ರಿಗಳನ್ನು ಕಾಲಿನಿಂದ ಒದ್ದು ಅವಮಾನಿಸಿದಾಗ ಇಂಚಾಡಿಯವರ ಅಂಗಡಿಯ ಕೆಲಸಗಾರರು ಸಹಜವಾಗಿ ಆಕ್ರೋಶಿತರಾಗಿ ಪೋಲೀಸ್ ಅಧಿಕಾರಿಯ ವಿರುದ್ಧ ಮಾತನಾಡಿದರು. ಇದರಿಂದ ಸಾರ್ವಜನಿಕವಾಗಿ ಅವಮಾನಗೊಂಡ ಪೋಲೀಸ್ ಅಧಿಕಾರಿ ಇಂಜಾಡಿ ಕೆಲಸದವರ ಮೇಲೆ ಹಾಗೂ ಆ ವೇಳೆಯಲ್ಲಿ ಅಂಗಡಿಯಲ್ಲಿ ಇಲ್ಲದ ಇಂಜಾಡಿಯವರ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಬೈದರು ಎಂದು ಕೇಸನ್ನು ಪೋಲೀಸ್ ಕಾಯ್ದೆಯಡಿಯಲ್ಲಿ ದಾಖಲಿಸಿದ್ದರು. ಇದನ್ನು ಒಂದನ್ನೆ ಆಧಾರವಾಗಿಟ್ಟುಕೊಂಡು ಆ ಪೋಲೀಸ್ ಅಧಿಕಾರಿ ಇಂಜಾಡಿಯವರ ಮೇಲೆ ರೌಡಿ ಶೀಟರ್ ಓಪನ್ (ತರೆಯುವ) ಮಾಡುವ ಕಲಸವನ್ನು ಮಾಡುತ್ತಾರೆ. ಆದರೆ ಹರೀಶ್ ರವರಲ್ಲಿ ರೌಡಿಸಂ ನ ಯಾವುದೇ ಲಕ್ಷಣಗಳು ಕಂಡುಬಾರದೇ ಇರುವ ಕಾರಣ ಅವರ ಮೇಲಿದ್ದ ಆಪಾದನೆಯ ರೌಡಿ ಪಟ್ಟಿಯನ್ನು 2008ರಲ್ಲಿ ಪೋಲೀಸ್ ಇಲಾಖೆಯು ತೆಗೆದಿರುವುದಾಗಿದೆ.


ಅಂಗಡಿ ವ್ಯವಹಾರದಲ್ಲಿ ನಷ್ಟ ಉಂಟಾಗಿ ಮೂರು ಕಂತಿನ ಹಣವನ್ನು ಸಂದಾಯ ಮಾಡುವರೇ ವಿಫಲವಾದಾಗ ಅದರಲ್ಲಿ ಕೂಡ
ರಾಜಕೀಯ ಎದುರಾಳಿಗಳು ಹರೀಶ್ ಇಂಜಾಡಿಯವರ ಮೇಲೆ ದೇವಸ್ಥಾನಕ್ಕೆ ಸಕಾಲದಲ್ಲಿ ಹಣ ಪಾವತಿಸದ ಬಗ್ಗೆ ಕೇಸನ್ನು ಮಾಡಿಸಿದರು. ಆದರೆ ಅದನ್ನು ನಂತರದ ಕೆಲವೇ ತಿಂಗಳುಗಳಲ್ಲಿ ಬಾಕಿಯಾದ ಸಂಪೂರ್ಣ ಹಣ ಪಾವತಿಸಿದ್ದು, ಈ ಬಗ್ಗೆ. ದಾಖಲಾದ ಪ್ರಕರಣದಲ್ಲಿ ಅವರು ನಿರ್ದೋಷಿ ಎಂದು ತೀರ್ಪಾಗಿರುತ್ತದೆ. ಈ ಎಲ್ಲಾ ಪ್ರಕರಣಗಳು ಇಪ್ಪತ್ತು ವರ್ಷಗಳ ಹಿಂದೆಯೇ ಮುಕ್ತಾಯಗೊಂಡಿರುತ್ತದೆ. ಆದರೂ ಈ. ಪಕರಣಗಳಿಗೆ ನೆಪ ವಾಗಿಟ್ಟಕೊಂಡು ಇಂಚಾಡಿಯವನ್ನು ತೇಜೋವಧ ಮಾಡುತ್ತಿರುವುದು ತೀರಾ ಖಂಡನೀಯ.

ಈಗ ಇಂಜಾಡಿಯವರನ್ನು ಮಾಜಿ ರೌಡಿ ಶೀಟರ್ ಅಂತ ಅಪ ಪ್ರಚಾರ ಮಾಡುವವರ ಮೇಲೂ ಸುಬ್ರಹ್ಮಣ್ಯ ಪೋಲೀಸ್ ಠಾಣೆಯೊಂದರಲ್ಲೇ 4 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಒಂದು ಸುಬ್ರಹ್ಮಣ್ಯ ಮಠದ ವೈದಿಕರ ಮೇಲೆಯೇ ದೈಹಿಕ ಹಲ್ಲೆ ನಡೆಸಿದ್ದಾಗಿದ್ದು ಇನ್ನೊಂದು ಪರಿಶಿಷ್ಟ ಜಾತಿಯವರ ಜಮೀನು ಅತಿಕ್ರಮಣದ ಕುರಿತು ಮಾಡಿದ ದೌರ್ಜನ್ಯದ ಕೇಸು. ಇನ್ನೊಂದು ಜಮೀನು ಕುರಿತು ಒಬ್ಬ ಗೌಡ ಸಮುದಾಯದವರ ಮೇಲೆ ದೌರ್ಜನ್ಯ ಮಾಡಿದ್ದ ಕೇಸುಗಳು ಆಗಿದ್ದು ಇನ್ನೊಂದು ಪ್ರಕರಣ ಚುನಾವಣಾ ಸಮಯ ರಾಜಕೀಯ ವಿಚಾರಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇದರ ಹೊರತು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬಹ್ಮಣ್ಯ ಮಠದವರು ಇವರ ವಿರುದ್ಧ ಹಾಕಿರುವ ಮಾನ ನಷ್ಟದ ಕೇಸುಗಳು ಮಂಗಳೂರು -ಬೆಂಗಳೂರುಗಳಲ್ಲಿ ಈಗಲೂ ನಡೆಯುತ್ತಿದೆ.

ಹೀಗಿರುವಾಗ ಹರೀಶ್ ಇಂಜಾಡಿಯವರ ಮೇಲೆ ಕ್ರಿಮಿನಲ್ ಕೇಸುಗಳ ಬಗ್ಗೆ ಆರೋಪ ಮಾಡುತ್ತಿರುವ ಇವರು ಎಷ್ಟು ಸಾಚರು ?. ಅಷ್ಟಕ್ಕೂ ಸಮಿತಿಯ ಸದಸ್ಯರ ಬೆಂಬಲ ಪಡೆದು ಅಧ್ಯಕ್ಷರಾಗಬೇಕಾಗಿರುವುದು ನಿಯಮವಾಗಿದುದ್ದರಿಂದ ಅಧ್ಯಕ್ಷ ಆಕಾಂಕ್ಷಿಯನ್ನು ಸೂಚಿನೆ ಮಾಡಲು ಕೂಡಾ ಒಬ್ಬ ಸದಸ್ಯ ಮುಂದೆ ಬಾರದೆ ಎಲ್ಲಾ ಎಂಟು ಸದಸ್ಯರು ಹರೀಶ್ ಇಂಜಾಡಿಯವರಿಗೆ ಬೆಂಬಲ ಸೂಚಿಸಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂಬುದನ್ನು ಗಮನಿಸಿದರೆ ಹರೀಶ್ ಇಂಜಾಡಿಯವರನ್ನು ಮತ್ತು ಅವರ ನಾಯಕತ್ವವನ್ನು ಒಪ್ಪಿಕೊಂಡರುವುದು ಉದಾಹಣೆಯಾಗಿರುತ್ತದೆ.
ಹರೀಶ್ ಇಂಚಾಡಿಯವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವ ದುಸಹಾಸಕ್ಕೆ ಯಾರು ಕೈ ಹಾಕಬೇಡಿ ಎಂದು ವಿನಂತಿಸುತ್ತಾ ಒಂದು ವೇಳೆ ಅಂತಹ ಅಚಾತುರ್ಯಕ್ಕೆ ಯಾರಾದರೂ ಕೈಹಾಕಿದ್ದಲ್ಲಿ ಮುಂದೆ ನಡೆಯುವ ಘಟನೆಗೆ ನಾವು ಜವಾಬ್ದಾರಲ್ಲ ಎಂದವರಗಳು ಹೇಳಿದರು.

ಇದಲ್ಲದೆ ಸುಬ್ರಹ್ಮಣ್ಯ ಗ್ರಾ.ಪಂ ನ ತೆರವಾದ ಒಂದು ಸ್ಥಾನದ ಚುನಾವಣೆಯಲ್ಲಿ ಚುನಾವಣೆಗೆ ಸ್ಪರ್ಧಿಯನ್ನು ಇಳಿಸಿ ಬಿಜೆಪಿ ಮೋಸ ಮಾಡಿದೆ. ಈ ಹಿಂದೆ ಕಸ್ತೂರಿ ರಂಗನ್ ವರಧಿ ಜಾರಿಯನ್ನು ತಡೆಹಿಡಿದರಷ್ಟೆ ಚುನಾವಣೆಗೆ ಸ್ಪರ್ಧಿಸುವ ಒಮ್ಮತದ ನಿರ್ಧಾರಕ್ಕೆ ಬರಲಾಗಿತ್ತು. ಆದರೀಗ ಕಸ್ತೂರಿ ರಂಗನ್ ವರಧಿ ಜಾರಿಗೆ ತಡೆಗೆ ಆದೇಶ ಜಾರಿಯಾಗಿಲ್ಲ. ರಾಜ್ಯ ಸರ್ಕಾರ ತಿರಸ್ಕರಿಸುವುದಾಗಿ ನಿರ್ಣಯಿದಷ್ಟೆ. ಇದನ್ನು ತಿರಸ್ಕರಿಸುವುದು ಕೇಂದ್ರ ಸರ್ಕಾರದ ಕೆಲಸ ಎಂದ ಶಿವರಾಮ ರೈ ಬಿಜೆಪಿ ಮಾತು ತಪ್ಪಿದೆ ಎಂದು ಆರೋಪಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಲೋಲಾಕ್ಷ ಕೈಕಂಬ, ಸತೀಶ್ ಕೂಜುಗೋಡು, ಪವನ್ ಎಂ.ಡಿ, ಅಚ್ಚುತ ಅಲ್ಕಬೆ ಮುಖಂಡರುಗಳಾದ ಕಿಶೋರ್ ಕುಮಾರ್ ಅರಂಪಾಡಿ, ಮನೋಜ್, ರತ್ನಾವತಿ ನೂಚಿಲ ಉಪಸ್ಥಿತರಿದ್ದರು.