ಮೇ.25; ಸುಳ್ಯದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರ

0

ಸೀಡ್ಸ್ ಆಫ್ ಇನೋಸೆನ್ಸ್ ಫರ್ಟಿಲಿಟಿ ಅಂಡ್ ಐ.ವಿ.ಎಫ್. ಸೆಂಟರ್ ಕಾಸರಗೋಡು ಹಾಗೂ ಅಮಿತಾ ವಿಮೆನ್ಸ್ ಕ್ಲಿನಿಕ್ ,ಭಾರತ್ ಮೆಡಿಕಲ್ಸ್ ಗಾಂಧಿನಗರ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಉಚಿತ ಬಂಜೆತನ ಮಾಹಿತಿ ಹಾಗೂ ತಪಾಸಣಾ ಶಿಬಿರ ಮೇ.25ರಂದು ಅಮಿತಾ ಕ್ಲಿನಿಕ್,ಭಾರತ್ ಮೆಡಿಕಲ್ ಗಾಂಧಿನಗರ,ಸುಳ್ಯ ಇಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರ ವರೆಗೆ ನಡೆಯಲಿದೆ.


ಈ ಶಿಬಿರದಲ್ಲಿ ಸೀಡ್ಸ್ ಆಫ್ ಇನೋಸನ್ಸ್ ಫೆರ್ಟಿಲಿಟಿ ಮತ್ತು ಐ.ವಿ.ಎಫ್. ನ ತಜ್ಞ ವೈದ್ಯರಾದ ಡಾ.ವಿನೋದ್ ಕುಮಾರ್ ಹಾಗೂ ಸುಳ್ಯದ ಹೆರಿಗೆ ಹಾಗೂ ಪ್ರಸೂತಿ ತಜ್ಞರಾದ ಡಾ.ಅಮಿತಾ ಅವರು ಬಂಜೆತನ ತಪಾಸಣೆ, ಮಾಹಿತಿ ಹಾಗೂ ಆಪ್ತ ಸಮಾಲೋಚನೆ ನಡೆಸಲಿದ್ದಾರೆ.