ಸುಬ್ರಹ್ಮಣ್ಯದಲ್ಲಿ ಕಾಣಿಕೆ ಹುಂಡಿ ಕಳವು ಮಾಡಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಬೀತಾಗಿರುವುದಾಗಿ ವರದಿಯಾಗಿದೆ.

ಆಪಾದಿತನ ವಿರುದ್ಧ ದಿನಾಂಕ 16.05.2019 ರಂದು ರಾತ್ರಿ 9 ಗಂಟೆ ಸಮಯಕ್ಕೆ ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ಸನ್ನಿಧಿಯ ಮುಂಭಾಗದಲ್ಲಿ ಇಟ್ಟಿರುವ ಹುಂಡಿಯಿಂದ ₹1885/- ಮತ್ತು ಅರ್ಧ ಹರಿದ ₹20/- ರ ನೋಟು ಹಣ ಕಳವು ಮಾಡಿದ್ದ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಯು ಸುಳ್ಯದ ಸಿ.ಜೆ. ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ನಡೆದು ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರಿ ಅರ್ಪಿತರವರು ಆರೋಪಿಯ ಅಪರಾಧ ಸಾಬೀತಾದ ಕಾರಣ ಆತನನ್ನು ದೋಷಿ ಎಂದು ಘೋಷಿಸಿರುತ್ತಾರೆ.
ಅಪರಾಧಿಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಮುಂಚಿತವಾಗಿ ಅಪರಾಧಿಗಳ ಪರಿವೀಕ್ಷಣೆ ಅಧಿನಿಯಮದಡಿಯಲ್ಲಿ ಅಪರಾಧಿಯ ಬಗ್ಗೆ ವರದಿಗಾಗಿ ಆದೇಶಿಸಿರುತ್ತಾರೆ.
ಪ್ರಕರಣವನ್ನು ಸಹಾಯಕ ಸರಕಾರಿ ಅಭಿಯೋಜಕರು ನಡೆಸಿದ್ದು ಈ ಮೊದಲು ಇದ್ದ ಆರೋನ್ ಡಿ’ಸೋಜರವರು ವಾದ ಮಂಡಿಸಿದ್ದರು