ಮಂಡೆಕೋಲು ಖುವ್ವತ್ತುಲ್ ಇಸ್ಲಾಂ ಮದರಸಾ ವಿದ್ಯಾರ್ಥಿಗಳಿಂದ ಮಾದಕ ವ್ಯಸನದ ಕುರಿತು ಜಾಗೃತಿ ಅಭಿಯಾನ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ಮೇ 18 ರಂದು ಮದ್ರಸಾ ವಠಾರದಲ್ಲಿ ನಡೆಯಿತು.
ಅಭಿಯಾನದಲ್ಲಿ ಸ್ಥಳೀಯ ಮದ್ರಸಾದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕ ವೃಂದದವರು ಭಾಗವಹಿಸಿದ್ದರು.
ಸ್ಥಳೀಯ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜಾಗೃತಿ ಫಲಕವನ್ನು ಪ್ರದರ್ಶಿಸಿ ಘೋಷಣೆಯನ್ನು ಕೂಗುತ್ತಾ ಅಮಲು ಪದಾರ್ಥದಿಂದ ದೂರ ಇರುವಂತೆ ಜಾಗೃತಿಯನ್ನು ಮೂಡಿಸಿದರು.
ಅಲ್ಲದೆ ಯಾವುದೇ ಸಂದರ್ಭದಲ್ಲಿಯೂ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುವುದಿಲ್ಲ ವೆಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.