ಬೋರುಗುಡ್ಡೆ ಬಳಿ ಮಳೆಗೆ ರಾಜಕಾಲುವೆಯ ಚರಂಡಿಯ ಬದಿ ಬರೆ ಕುಸಿತ

0

ಸ್ಥಳೀಯ ಮನೆಯವರು ಆತಂಕದಲ್ಲಿ

ಸುಳ್ಯ ಬೋರುಗುಡ್ಡೆ ವಾರ್ಡ್ ಗ್ರೀನ್ ವ್ಯೂ ಶಾಲೆಯ ಬಳಿ ಇರುವ ರಾಜ ಕಾಲುವೆ ಚರಂಡಿ ಬಳಿ ಕಳೆದ ದಿನಗಳಲ್ಲಿ ಬರುತ್ತಿರುವ ಮಳೆಯಿಂದಾಗಿ ಬರೆ ಕುಸಿತ ಉಂಟಾಗಿದೆ.ಇಲ್ಲೇ ಪಕ್ಕದಲ್ಲಿ ಸ್ಥಳೀಯ ನಿವಾಸಿ ಅಬ್ಬಾಸ್ ಪಿ ಎ ಎಂಬವರ ಮನೆಯಿದ್ದು ಬರೆ ಕುಸಿತ ದಿಂದ ಮನೆ ಅಪಾಯಕಾರಿ ಸ್ಥಿತಿಯಲ್ಲಿದ್ದು ಮುಂದಿನ ಮಳೆಯ ದಿನಗಳಲ್ಲಿ ಅಪಾಯ ಸಂಭವಿಸ ಬಹುದೆಂಬ ಆತಂಕದಲ್ಲಿದ್ದಾರೆ.