ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ದಾವೆಯ ಕುರಿತಂತೆ ವಿಚಾರಣೆಯನ್ನು ಮೇ. 29 ಕ್ಕೆ ಮುಂದೂಡಿರುವುದಾಗಿ ತಿಳಿದು ಬಂದಿದೆ.
ದೇವಸ್ಥಾನಕ್ಕೆೆ ನಕಲಿ ಚೆಕ್ ನೀಡಿ ವಂಚಿಸಿದವರನ್ನೇ ದೇವಸ್ಥಾನಕ್ಕೆೆ ಟ್ರಸ್ಟಿಯಾಗಿ ನೇಮಿಸಲಾಗಿದೆ, ಅಲ್ಲದೆ ಈಗ ಅವರೇ ಅಧ್ಯಕ್ಷರಾಗಿದ್ದಾರೆ, ಅವರು ರೌಡಿಶೀಟರ್ ಕೂಡ ಆಗಿದ್ದರು, ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲಿ ಹಲವರು ರಾಜಕೀಯ ಪಕ್ಷದ ಪದಾಧಿಕಾರಿಗಳಾಗಿದ್ದಾರೆ, ಸುಬ್ರಹ್ಮಣ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಘೋಷಣೆ ಮತ್ತು ಅಧ್ಯಕ್ಷರ ಆಯ್ಕೆ ನಡೆಸಲಾಗಿದೆ, ಈ ಎಲ್ಲಾ ಹಿನ್ನೆೆಲೆಯಲ್ಲಿ ಈಗ ಕುಕ್ಕೆೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆೆ ನೇಮಕಗೊಂಡಿರುವ ಇಡೀ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕು ಮತ್ತು ವಿಚಾರಣೆ ಮುಗಿಯುವ ವರೆಗೆ ತಡೆಯಾಜ್ಞೆ ನೀಡಬೇಕು ಎಂದು ಆಕಾಶ್ ಎಂಬವರು ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮೇ.29 ಕ್ಕೆ ಮುಂದೂಡಿದೆ.
ಸುಬ್ರಹ್ಮಣ್ಯದಲ್ಲಿ ಬೆಳ್ಳಿ ಬಾರ್ ನಡೆಸುತ್ತಿರುವ ಆಕಾಶ್ ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಕಾಶ್‌ರವರು ಕಮಿಟಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ದಾವೆ ಮೇ.15 ರಂದು ಗುರುವಾರ ವಿಚಾರಣೆಗೆ ಸ್ವೀಕೃತಗೊಂಡಿತ್ತು. ಇಂದು ಪರ ವಿರೋಧ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮೇ.29 ಕ್ಕೆ ಮುಂದೂಡಿದರೆಂದು ತಿಳಿದುಬಂದಿದೆ.

ದಾವೆಯಲ್ಲಿ ಪ್ರಧಾನವಾಗಿ ಹರೀಶ್ ಇಂಜಾಡಿಯವರ ಬಗ್ಗೆೆ ದೋಷಾರೋಪ ಮಾಡಲಾಗಿತ್ತು. ಅಲ್ಲದೆ ಮಹೇಶ್ ಕರಿಕ್ಕಳ, ಹರೀಶ್ ಇಂಜಾಡಿ, ಲೀಲಾ ಮನಮೋಹನ್, ಸೌಮ್ಯ ಭರತ್ ಇವರೆಲ್ಲ ಹಾಲಿ ಗ್ರಾಾಮ ಪಂಚಾಯತ್ ಸದಸ್ಯರಾಗಿದ್ದಾರೆ, ರಾಜಕೀಯ ಪಕ್ಷದಲ್ಲಿ ಗುರುತಿಸಿ ಕೊಂಡಿರುವವರು, ಲೀಲಾ ಮನಮೋಹನರ ನೇಮಕಕ್ಕೆೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿಯವರು ಸಚಿವರಿಗೆ ಶಿಫಾರಸು ಪತ್ರ ನೀಡಿದ್ದಾರೆ, ಈ ಎಲ್ಲಾ ಕಾರಣದಿಂದ ದೇವಸ್ಥಾನದ ಹಿತದೃಷ್ಠಿಯಿಂದ ಈಗಿನ ಕಮಿಟಿಯನ್ನು ರದ್ದುಪಡಿಸಬೇಕು. ತಕ್ಷಣಕ್ಕೆೆ ತಡೆಯಾಜ್ಞೆ ನೀಡಬೇಕು ಎಂದು ಆಕಾಶ್‌ರವರು ನ್ಯಾಯಾಲಯವನ್ನು ವಿನಂತಿಸಿ ಕೊಂಡಿದ್ದರು.
ಈ ರೀತಿ ತಡೆಯಾಜ್ಞೆಗೆ ಯಾರಾದರೂ ಕೋರ್ಟಿಗೆ ಹೋಗಬಹುದೆಂಬ ನಿರೀಕ್ಷೆ ಮೊದಲೇ ಇದ್ದುದರಿಂದ ಹರೀಶ್ ಇಂಜಾಡಿ ಮತ್ತವರ ತಂಡ ಕೋರ್ಟ್‌ಗಳಲ್ಲಿ ಕೇವಿಯೆಟ್ ಹಾಕಿತ್ತು.
ಆಕಾಶ್ ಪರವಾಗಿ ಹೈಕೋರ್ಟ್ ನ್ಯಾಯವಾದಿ ಬೆಂಗಳೂರಿನ ವಿವೇಕ್ ಸುಬ್ಬರೆಡ್ಡಿ ವಾದಿಸಿದ್ದರು.