ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯ ವಿರುದ್ಧ ತಡೆಯಾಜ್ಞೆ ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ದಾವೆಯ ವಿಚಾರಣೆ ಜೂನ್.3 ಕ್ಕೆ ಮುಂದೂಡಲ್ಪಟ್ಟಿದೆ.
ಆಕಾಶ್ ಎಂಬವರು ಹೂಡಿದ ದಾವೆ ಮೇ.20 ರಂದು ವಿಚಾರಣೆಗೆ ಬಂದಾಗ ಮೇ.29 ಕ್ಕೆ ಮುಂದೂಡಲ್ಪಟ್ಟಿತ್ತು. ಇಂದು ಹೈಕೋರ್ಟ್ ನಲ್ಲಿ ದಾವೆ ವಿಚಾರಣೆಗೆ ಬಂದಾಗ ಜೂ.3 ಕ್ಕೆ ಮುಂದೂಡಲ್ಪಟ್ಟಿತೆಂದು ತಿಳಿದುಬಂದಿದೆ.

ದೇವಸ್ಥಾನಕ್ಕೆೆ ವಂಚಿಸಿದವರನ್ನೇ ದೇವಸ್ಥಾನಕ್ಕೆೆ ಟ್ರಸ್ಟಿಯಾಗಿ ನೇಮಿಸಲಾಗಿದೆ. ಅಲ್ಲದೆ ಈಗ ಅವರೇ ಅಧ್ಯಕ್ಷರಾಗಿದ್ದಾರೆ. ಅವರು ಹಿಂದೆ ರೌಡಿಶೀಟರ್ ಕೂಡ ಆಗಿದ್ದರು, ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲಿ ಹಲವರು ರಾಜಕೀಯ ಪಕ್ಷದ ಪದಾಧಿಕಾರಿಗಳಾಗಿದ್ದಾರೆ. ಕೆಲವರ ನೇಮಕಕ್ಕೆ ರಾಜಕೀಯ ಪ್ರಭಾವ ಕೂಡ ಬೀರಲಾಗಿದೆ. ಈ ಎಲ್ಲಾ ಹಿನ್ನೆೆಲೆಯಲ್ಲಿ ಈಗ ಕುಕ್ಕೆೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆೆ ನೇಮಕಗೊಂಡಿರುವ ಇಡೀ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕು ಮತ್ತು ವಿಚಾರಣೆ ಮುಗಿಯುವ ವರೆಗೆ ತಡೆಯಾಜ್ಞೆ ನೀಡಬೇಕು ಎಂದು ಸುಬ್ರಹ್ಮಣ್ಯದ ಉದ್ಯಮಿ ಆಕಾಶ್ ಎಂಬವರು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ.