ಕೆಜೆಯು ಸುಳ್ಯ ಘಟಕದ ವತಿಯಿಂದ ದಾನಿಗಳ ಮೂಲಕ ಕೊಡಮಾಡಿದ ಲೇಖನ ಸಾಮಗ್ರಿ ಮತ್ತು ಕೊಡೆ ವಿತರಣೆ

0

ಕೆಜೆಯು ಸುಳ್ಯ ಘಟಕದ ವತಿಯಿಂದ ಆರ್ಥಿಕವಾಗಿ ಹಿಂದುಳಿದ 2 ವಿದ್ಯಾರ್ಥಿಗಳಿಗೆ ದಾನಿಗಳ ಮೂಲಕ ಕೊಡಮಾಡಿದ ಲೇಖನ ಸಾಮಗ್ರಿ ಮತ್ತು ಕೊಡೆ ವಿತರಣೆ ಕಾರ್ಯಕ್ರಮ ಮೇ. 31ರಂದು ಸುದ್ದಿ ಸ್ಟುಡಿಯೋದಲ್ಲಿ ನಡೆಯಿತು.

ದಿ.ರವಿ ಜಯನಗರರವರ ಮಕ್ಕಳಾದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಯಕ್ಷಿತ್ ಕುಮಾರ್ ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಲಾಸ್ಯರವರಿಗೆ ನೀಡಿದ ಲೇಖನ ಸಾಮಾಗ್ರಿ ಮತ್ತು ಕೊಡೆಯನ್ನು ಕೆಜೆಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಮತ್ತು ಸುಳ್ಯ ಕೆಜೆಯು ಘಟಕದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿoಗೋಡಿಯವರು ಮಕ್ಕಳ ತಾಯಿ ಶ್ರೀಮತಿ ಚಂದ್ರಾವತಿ ರವಿ ಜಯನಗರರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ, ಕೆಜೆಯು ಸುಳ್ಯ ಘಟಕದ ಖಜಾಂಜಿ ಕುಶಾಂತ್ ಕೊರತ್ಯಡ್ಕ, ಕೆಜೆಯು ಸುಳ್ಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯಶ್ವಿತ್ ಕಾಳಮ್ಮನೆ ಸ್ವಾಗತಿಸಿ, ಹಸೈನಾರ್ ಜಯನಗರ ವಂದಿಸಿದರು.