75 ಮೀಟರ್ ಉದ್ದಕ್ಕೆ ಗುಡ್ಡ ಕುಸಿತ : 20 ಮನೆಗಳಿಗೆ ಸಂಪರ್ಕ ಕಡಿತ
ತಹಶೀಲ್ದಾರ್ ಸಹಿತ ಅಧಿಕಾರಿಗಳ ತಂಡ ಭೇಟಿ

ಬಾರೀ ಮಳೆಯ ಪರಿಣಾಮ ಪೆರುವಾಜೆಯ ಮುಂಡಾಜೆಯಲ್ಲಿ ಗುಡ್ಡ ಜರಿದು ಸುಮಾರು 75 ಮೀಟರ್ ರಸ್ತೆ ಮೇಲೆ ಮಣ್ಣು ನಿಂತಿದ್ದು 20 ಕುಟುಂಬಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮೇ.31ರಂದು ಮಧ್ಯಾಹ್ನದ ವೇಳೆಗೆ ಈ ಅವಘಡ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ. ಆರ್.ಐ. ಅವಿನ್, ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪಂಚಾಯತ್ ಸದಸ್ಯರು, ಪಿಡಿಒ ಪ್ರಭಾರ ತಿರುಮಲೇಶ್ವರ ಇಂಜಿನಿಯರ್ ಗಳ ತಂಡ, ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಘಟನೆಯಿಂದ ಕಾಂಕ್ರೀಟ್ ರಸ್ತೆಯ ಸಂಪರ್ಕ ಕಡಿತವಾಗಿದೆ. ರಸ್ತೆಯ ಆ ಭಾಗದಲ್ಲಿರುವ 20 ರಷ್ಟು ಕುಟುಂಬಕ್ಕೆ ಸಂಪರ್ಕ ಇಲ್ಲವಾಗಿದೆ.
75 ಮೀಟರ್ ಗೂ ಹೆಚ್ಚು ಉದ್ದಕ್ಕೆ ರಸ್ತೆಗೆ ಮಣ್ಣು ಬಿದ್ದಿರುವುದರಿಂದ ಅದನ್ನು ತೆರವು ಮಾಡುವುದು ಸಧ್ಯಕ್ಕೆ ಕಷ್ಟವಾಗಿದ್ದು, ಪರ್ಯಾಯ ರಸ್ತೆಯ ನೋಡಲಾಗುತ್ತಿದೆ ಎಂದು ತಿಳಿದುಬಂದಿದೆ.