ಒಂಟಿಯಾಗಿ ಜೀವಿಸುತ್ತಿದ್ದ ವೃದ್ಧನ ಮೃತದೇಹವೆಂಬ ಶಂಕೆ

ಬಾವಿಯಲ್ಲಿ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮರ್ಕಂಜದ ಬೊಮ್ಮಾರಿನಿಂದ ಇದೀಗ ವರದಿಯಾಗಿದೆ.
ಬೊಮ್ಮಾರು ನಿವಾಸಿ ಶೀನ ಪೂಜಾರಿ ಎಂಬವರ ಮೃತದೇಹ ಇದಾಗಿರಬಹುದೆಂದು ಅಂದಾಜಿಸಲಾಗಿದೆ.

ಅವರು ಕಳೆದ ಕೆಲ ವರ್ಷಗಳಿಂದ ಒಬ್ಬರೇ ವಾಸಿಸುತ್ತಿದ್ದರು. ಕಳೆದ ಏಳೆಂಟು ದಿನಗಳಿಂದ ಶೀನ ಪೂಜಾರಿಯವರು ಯಾರಿಗೂ ಕಾಣಿಸುತ್ತಿರಲಿಲ್ಲ. ಹೀಗಾಗಿ ಅವರದ್ದೇ ಮೃತದೇಹ ಎಂದು ಹೇಳಲಾಗುತ್ತಿದೆ.
ಇಂದು ಮಧ್ಯಾಹ್ನ ಬೊಮ್ಮಾರು ಆಸುಪಾಸಿನಲ್ಲಿ ಕೊಳೆತ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಬಾವಿಯಲ್ಲಿ ಶವ ಇರುವುದು ಕಂಡು ಬಂದಿದೆ. ಇದೀಗ ಸ್ಥಳದಲ್ಲಿ ಸ್ಥಳೀಯರು ಸೇರಿದ್ದು, ಪೋಲೀಸರ ಬಂದ ಬಳಿಕ ಶವ ತೆಗೆಯಬೇಕಾಗಿದೆ. ಆಂಬುಲೆನ್ಸ್ ಕೂಡ ಸ್ಥಳದಲ್ಲಿದೆ.

ಶೀನ ಪೂಜಾರಿಯವರಿಗೆ ಇಬ್ಬರು ಪುತ್ರರಿದ್ದಾರೆ.
ಶೀನ ಪೂಜಾರಿಯವರು ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾಗಿ ಜೈಲುವಾಸ ಅನುಭವಿಸಿ ಬಂದಿದ್ದರು. ಪತ್ನಿಯ ಕೊಲೆಯ ನಂತರ ಅವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು.