ಸುಳ್ಯ :ಸರ್ಕಾರಿ ಆಸ್ಪತ್ರೆಯ ಡಿ ದರ್ಜೆ ನೌಕರರ ಮುಷ್ಕರ ಅಂತ್ಯ

0

ಇಂದಿನಿಂದ ಕೆಲಸಕ್ಕೆ ಹಾಜರಾದ ಸಿಬ್ಬಂದಿಗಳು

ಆಸ್ಪತ್ರೆಯಲ್ಲಿ 3 ದಿನಗಳ ಸೇವೆ ನೀಡಿದ ಆಂಬ್ಯುಲೆನ್ಸ್ ಸಂಘಕ್ಕೆ ಅಭಿನಂದನೆ ಸಲ್ಲಿಸಿದ ವೈದ್ಯಾಧಿಕಾರಿ

ಸುಳ್ಯ ಸರ್ಕಾರಿ ಆಸ್ಪತ್ರೆಯ ಡಿ ದರ್ಜೆ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳ ಬಾರದ ಹಿನ್ನೆಲೆ ಸಂಬಂಧಪಟ್ಟ ಸಿಬ್ಬಂದಿಗಳು ಕಳೆದ 3 ದಿನ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟಿಸುತ್ತಿದ್ದರು.

ಈ ನಡುವೆ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಸಂಘದ ಸುಮಾರು 25 ಕ್ಕೂ ಹೆಚ್ಚು ಸದಸ್ಯರು 3 ದಿನಗಳಲ್ಲಿ ತುರ್ತು ಸೇವೆಯನ್ನು ನೀಡಿ ರೋಗಿಗಳಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಸಹಕಾರ ನೀಡಿದ್ದರು.

ಈ ಎಲ್ಲಾ ಮಾಹಿತಿ ಸುದ್ದಿ ಚಾನಲ್, ವೆಬ್ಸೈಟ್, ಪತ್ರಿಕೆ ಗಳಲ್ಲಿ ವರದಿ ಪ್ರಸಾರವಾಗಿ
ನಿನ್ನೆ ಸುಳ್ಯ ಸೂಡಾ ಅಧ್ಯಕ್ಷ ರಾದ ಮಸ್ತಫಾ ಕೆ ಎಂ ರವರು ಮೈಸೂರು ಗೆ ತೆರಳಿ ಸಂಭಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ, ಹಾಗೂ ಸುಳ್ಯ ಆಂಬುಲೆನ್ಸ್ ಚಾಲಕ ಸಂಘದ ಪ್ರತಿಭಟನೆಯ ಎಚ್ಚರಿಕೆ, ಹಾಗೂ ಡಿ ದರ್ಜೆ ನೌಕರರ ಗೈರು ಹಾಜರಿ ಯಿಂದ ಆಗುತ್ತಿರುವ ಸಮಸ್ಯೆ ಇದೆಲ್ಲಾದರ ಫಲ ವಾಗಿ ಇಲಾಖೆ ಕೂಡಲೇ ಸ್ಪಂದಿಸಿ ಎಲ್ಲಾ ಸಿಬ್ಬಂದಿ ಗಳಿಗೆ ಒಂದು ತಿಂಗಳ ಸಂಬಳವನ್ನು ಪಾವತಿಸಿದ್ದು ಉಳಿದ ಎರಡು ತಿಂಗಳ ಸಂಬಳ 5 ದಿನಗಳಲ್ಲಿ ನೀಡುವ ಭರವಸೆ ನೀಡಿರುವ ಕಾರಣ ಆಸ್ಪತ್ರೆಗೆ ಬಾರದೆ ಪ್ರತಿಭಟನೆ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗಳು ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.