ಸುಳ್ಯ ರಂಗಮಯೂರಿ ಕಲಾ ಶಾಲೆಯಲ್ಲಿ ವಿಶ್ವ ಅರೆಭಾಷೆ ಹಬ್ಬ- 2022

0

 

 

ಡಾ.ಕೆ.ವಿ.ರೇಣುಕಾ ಪ್ರಸಾದ್ ರವರಿಂದ ದೀಪ ಪ್ರಜ್ವಲನೆ

ಆಟಿ ಕಳಂಜನಿಗೆ ಭತ್ತ ದವಸ ಧಾನ್ಯ ನೀಡಿ ಹಬ್ಬಕ್ಕೆ ಚಾಲನೆ

ಸುಳ್ಯ ಗೌಡರ ಯುವ ಸೇವಾ ಸಂಘ ,ಕೊಡಗು ಗೌಡ ಯುವ ವೇದಿಕೆ ಮತ್ತು ಆಂಗಿಕ ಮಲ್ಟಿ ಮೀಡಿಯಾ ಇದರ ಸಹಯೋಗದಲ್ಲಿ 3 ನೇ ವರ್ಷದ ವಿಶ್ವ ಅರೆಭಾಷೆ ಹಬ್ಬ- 2022 ರ ಉದ್ಘಾಟನಾ ಕಾರ್ಯಕ್ರಮ ಸುಳ್ಯ ರಂಗ ಮಯೂರಿ ಕಲಾ ಶಾಲೆಯಲ್ಲಿ ಆ.7 ರಂದು ನಡೆಯಿತು.

 

ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು ರವರು ಅಧ್ಯಕ್ಷತೆ ವಹಿಸಿದ್ದರು. ಎ.ಒ.ಎಲ್. ಇ. ಪ್ರಧಾನ ಕಾರ್ಯದರ್ಶಿ , ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾ ಪ್ರಸಾದ್ ಕೆ‌.ವಿ ದೀಪ ಪ್ರಜ್ವಲಿಸಿದರು. ಮುಖ್ಯ ಅಭ್ಯಾಗತರಾಗಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ, ಕೊಡಗ್ ಗೌಡ ಯುವ ವೇದಿಕೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರ ಸೀತಾರಾಮ ಕೇವಳ ,
ಗೌಡ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 


ಅರೆಭಾಷೆಯ ಮಹತ್ವದ ಕುರಿತು ಸೀತಾರಾಮ ಕೇವಳ ರವರು ಉಪನ್ಯಾಸ ನೀಡಿದರು.
ಚರಿಷ್ಮಾ ಮತ್ತು ತುಳಸಿ ಅರೆಭಾಷೆಯ ಪ್ರಾರ್ಥನೆ ಮಾಡಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಭವಾನಿಶಂಕರ ಅಡ್ತಲೆ ಪ್ರಾಸ್ತಾವಿಕ ಮಾತನಾಡಿದರು. ರಂಗ ಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ವಂದಿಸಿದರು. ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.
ಆಟಿ ಕಳಂಜನಿಗೆ ಭತ್ತ ದವಸ ಧಾನ್ಯ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು. ಆಟಿಯ ವಿಶೇಷ ಆಹಾರ ಖಾದ್ಯ ಗಳ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಕರಾಗಿ ವಿಖ್ಯಾತ್ ಬಾರ್ಪಣೆ ಮತ್ತು ಸುಶ್ಮಿತಾ ಕಡಪಳ ನಿರ್ವಹಿಸಿದರು. ಸುದ್ದಿ ಯೂ ಟ್ಯೂಬ್ ಚಾನೆಲ್ ನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು.