ಬಳ್ಪ ಗ್ರಾ.ಪಂ.ಅಧ್ಯಕ್ಷೆಯಾಗಿ ಶ್ರೀಮತಿ ಶಶಿಕಲಾ ಚೂಂತಾರು

0

 

 

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಮಹಿಳಾ ಮೋರ್ಚಾದ ಸದಸ್ಯೆಯಾದ ಶ್ರೀಮತಿ ಶಶಿಕಲಾ ಚೂಂತಾರು ಆ.10 ರಂದು ನಡೆದ ಬಳ್ಪ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಳ್ಪ ಗ್ರಾಮ ಪಂಚಾಯತ್ ಗೆ ಅಧ್ಯಕ್ಷ ಸ್ಥಾನ ಮಹಿಳಾ ಮೀಸಲಾತಿ ಬಂದುದರಿಂದ ಮೊದಲ ಅವಧಿಗೆ ಕುಸುಮಾ ಎಸ್ ರೈ ಕೇನ್ಯ ಇವರು ಆಯ್ಕೆಯಾಗಿದ್ದರು. ಪಕ್ಷದ ತೀರ್ಮಾನದಂತೆ ಅವರು ರಾಜೀನಾಮೆ ನೀಡಿ ತೆರವಾದ ಸ್ಥಾನಕ್ಕೆ ಶ್ರೀಮತಿ ಶಶಿಕಲಾ ಚೂಂತಾರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.