ಜಾಲ್ಸೂರಿನಲ್ಲಿ ಮೆಸ್ಕಾಂ ಶಾಖೆ ಲೋಕಾರ್ಪಣೆ

0

 

 

ಜಾಲ್ಸೂರು, ಕನಕಮಜಲು, ಮಂಡೆಕೋಲು ಗ್ರಾಮಸ್ಥರಿಗೆ ಅನುಕೂಲ

ಜಾಲ್ಸೂರು, ಕನಕಮಜಲು ಹಾಗೂ ಮಂಡೆಕೋಲು ಗ್ರಾಮಕ್ಕೊಳಪಡುವಂತೆ ಕಾರ್ಯ ನಿರ್ವಹಣೆಗೆ ಮೆಸ್ಕಾಂ ಶಾಖೆ ಜಾಲ್ಸೂರು ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಲೋಕಾರ್ಪಣೆ ಗೊಂಡಿದೆ.

ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಶಾಖೆಯನ್ನು ಉದ್ಘಾಟಿಸಿ ಶುಭಾಹಾರೈಸಿದರು.

 

ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಕೆ.ಎಂ., ತಹಶೀಲ್ದಾರ್ ಅನಿತಾಲಕ್ಷ್ಮಿ, ಇ.ಒ. ಭವಾನಿಶಂಕರ್, ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್, ಜಾಲ್ಸೂರು ಶಾಖೆಯ ಜೆ.ಇ. ಮಹೇಶ್ ಕುಳ ಮೊದಲಾದವರಿದ್ದರು.

*3 ಗ್ರಾಮದ ಜನರಿಗೆ ಅನುಕೂಲ* : ರಜಾ ದಿನ ಹೊರತು ಪಡಿಸಿ ಪ್ರತಿ ದಿನ ವಿದ್ಯುತ್ ಬಿಲ್ ಪಾವತಿಗೆ ಅವಕಾಶ, ಮೂರು ಗ್ರಾಮಗಳ ದೂರುಗಳನ್ನು ನೀಡಲು ಕೌಂಟರ್ ಹಾಗೂ ಸೇವೆ ಒದಗಿಸುವಿಗೆ ಮೊದಲಾದ ವ್ಯವಸ್ಥೆ ಗಳನ್ನು ಇಲ್ಲಿ ನೀಡಲಾಗುತ್ತದೆ. ಇದುವರೆಗೆ ಬಿಲ್ ಪಾವತಿ, ಸಮಸ್ಯೆಯ ದೂರು ನೀಡಲು ಸುಳ್ಯಕ್ಕೆ ಹೋಗಬೇಕಿತ್ತು. ಆದರೆ ಇದೀಗ ಮೂರು‌ ಗ್ರಾಮಗಳ ಜನರಿಗೆ ಅನುಕೂಲಕ್ಕಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.

*ಆಕ್ಷೇಪ ಹಿನ್ನಲೆ – ಮೂರು ಗ್ರಾಮ ಕೈ ಬಿಟ್ಟ ಮೆಸ್ಕಾಂ* : ಜಾಲ್ಸೂರು ಗ್ರಾಮವನ್ನು ಕೇಂದ್ರವಾಗಿಟ್ಟು ಜಾಲ್ಸೂರು, ಕನಕಮಜಲು, ಮಂಡೆಕೋಲು, ಅಜ್ಜಾವರ, ಅಮರಮುಡ್ನೂರು ಹಾಗೂ ಉಬರಡ್ಕ ಮಿತ್ತೂರು ಗ್ರಾಮವನ್ನು ಕೂಡಿಸಿಕೊಂಡು ಮೆಸ್ಕಾಂ ಶಾಖೆ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಉಬರಡ್ಕ ಮಿತ್ತೂರು, ಅಜ್ಜಾವರ ಹಾಗೂ ಅಮರಮುಡ್ನೂರು ಗ್ರಾಮಗಳ ಜನರು ಜಾಲ್ಸೂರಿಗೆ ಬರಲು ದೂರವಾಗುವ ಹಿನ್ನಲೆಯಲ್ಲಿ ಸುಳ್ಯ ಮೆಸ್ಕಾಂ ಶಾಖೆಯಲ್ಲಿ ಉಳಿಸಿಕೊಳ್ಳಬೇಕೆಂಬ ಬೇಡಿಕೆ ಆ ಮೂರು ಗ್ರಾಮಗಳವರು ಇಟ್ಟಿದ್ದರಿಂದ ಇದೀಗ ಆ ಮೂರು ಗ್ರಾಮವನ್ನು ಸುಳ್ಯದಲ್ಲೆ ಉಳಿಸಿಕೊಂಡು ಜಾಲ್ಸೂರು, ಕನಕಮಜಲು ಹಾಗೂ ಮಂಡೆಕೋಲು ಗ್ರಾಮಸ್ಥರಿಗೆ ಜಾಲ್ಸೂರಿನಲ್ಲಿ ಅವಕಾಶ ಕಲ್ಪಿಸಲಾಗಿದೆ.