ಬಾಳಿಲದಲ್ಲಿ ಗಣೇಶೋತ್ಸವ

0

ನಾಗರಿಕ ಸೇವಾ ಸಮಿತಿ ಬಾಳಿಲ – ಮುಪ್ಪೇರ್ಯ ಇದರ ಆಶ್ರಯದಲ್ಲಿ 39ನೇ ವರ್ಷದ ನಾಡಹಬ್ಬ ಗಣೇಶೋತ್ಸವ 2022 ಆಗಸ್ಟ್ 31 ರಂದು ನಡೆಯುತ್ತಿದೆ. ಬೆಳಿಗ್ಗೆ ಗಣಪತಿ ಪ್ರತಿಷ್ಠೆ ಮತ್ತು ಪೂಜಾ ಕಾರ್ಯಕ್ರಮ, ಮಧ್ಯಾಹ್ನ ಮಹಾ ಮಂಗಳಾರತಿ ಪ್ರಸಾದ ಭೋಜನ ನಡೆಯಲಿದೆ. ರಾತ್ರಿ 9:30 ರಿಂದ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಬಾಳಿಲದಿಂದ ಬೊಮ್ಮನಮಜಲಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆದು ಮೂರ್ತಿ ವಿಸರ್ಜನೆ ನಡೆಯಲಿದೆ.

ಮಧ್ಯಾಹ್ನ ಸಮಿತಿಯ ಗೌರವಾಧ್ಯಕ್ಷ ಪಿ.ಜಿ.ಎಸ್.ಎನ್. ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬೆಳ್ಳಾರೆ ಕೆ.ಪಿ.ಎಸ್ ನಿವೃತ್ತ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗಪ್ಪು, ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಮುಪ್ಪೇರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಕಿಶನ್ ರಾವ್ ಬಾಳಿಲ ಮತ್ತು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಪ್ರದೀಪ್ ತೋಟ ಇವರನ್ನು ಸನ್ಮಾನಿಸಲಾಯಿತು. ಡಾ. ಕಿಸನ್ ರಾವ್ ಬಾಳಿಲರವರ ಸನ್ಮಾನ ಪತ್ರವನ್ನು ಬಾಳಿಲ ಗ್ರಾ.ಪಂ. ಸದಸ್ಯ ರಮೇಶ್ ರೈ ಬಾಳಿಲ ಮತ್ತು ಪ್ರದೀಪ್ ತೋಟರ ಸನ್ಮಾನಪತ್ರವನ್ನು ಅಜಿತ್ ಕೊಡೆಂಕಿರಿ ಮತ್ತು ನಾಟಿವೈದ್ಯೆ ಕೊಂಬೆಚ್ಚಿ ಚಾಕೊಟೆಡ್ಕರವರ ಸನ್ಮಾನ ಪತ್ರವನ್ನು ರಾಮ್ ಪ್ರಸಾದ್ ಕಾಂಚೋಡು ವಾಚಿಸಿದರು. ಡಾ. ಕಿಶನ್ ರಾವ್ ರವರ ಧರ್ಮಪತ್ನಿ ಶ್ರೀಮತಿ ಸೌಮ್ಯಶ್ರೀ, ಪ್ರದೀಪ್ ತೋಟರವರ ತಂದೆ ಸದಾನಂದ ಪೂಜಾರಿ ತೋಟ ಮತ್ತು ತಾಯಿ ಶ್ರೀಮತಿ ದೇವಕಿ ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಬೆಳಿಗ್ಗೆಯಿಂದ ಸಾರ್ವಜನಿಕರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಿತು. ಪುರುಷರಿಗೆ ಮತ್ತು ಮಹಿಳೆಯರಿಗೆ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ,
ಪುರುಷರಿಗೆ 65 ಕೆಜಿ ವಿಭಾಗದ ಮತ್ತು 45 ಕೆಜಿ ವಿಭಾಗದ ಕಬ್ಬಡಿ ಪಂದ್ಯಾಟ, ಅಂಗನವಾಡಿ ಮಕ್ಕಳಿಗೆ, 1ರಿಂದ 4ನೇ ತರಗತಿ ಮಕ್ಕಳಿಗೆ 5 ರಿಂದ 7ನೇ ತರಗತಿ ಮಕ್ಕಳಿಗೆ 8ರಿಂದ ಪದವಿ ಪೂರ್ವ ತರಗತಿವರೆಗಿನ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಬೆಳಿಗ್ಗೆ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಬಾಳಿಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ 7 ರಿಂದ ಯಕ್ಷಗಾನ ಬಯಲಾಟ ಲಕ್ಷ್ಮಿ ಸ್ವಯಂವರ ನಡೆಯಲಿದೆ. ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇದರ ಮಹಿಳಾ ತಂಡದಿಂದ ಪ್ರಾರ್ಥನೆ ನಡೆಯಿತು. ಶ್ರೀನಾಥ್ ರೈ ಬಾಳಿಲ ಸ್ವಾಗತಿಸಿ ರವೀಂದ್ರ ರೈ ಟಪ್ಪಾಲುಕಟ್ಟೆ ವಂದಿಸಿದರು. ಉಪನ್ಯಾಸಕ ರಾಮ್ ಪ್ರಸಾದ್ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು.