ಸೆ.26 ರಿಂದ ಅ.5 ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇಲ್ಲಿ ನವರಾತ್ರಿ ಉತ್ಸವ

0

 

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇಲ್ಲಿ ಸೆ.26 ರಿಂದ ಆರಂಭಗೊಂಡು
ಅ.5 ತನಕ ಶ್ರೀ ದೇವಳದಲ್ಲಿ
ನವರಾತ್ರಿಯ ಉತ್ಸವವು ವಿವಿಧ ಧಾರ್ಮಿಕ ಕ್ರಿಯಾದಿಗಳೊಂದಿಗೆ ಜರಗಲಿರುವುದು.
ಸೆ.26 ಬೆಳಗ್ಗೆ ಗಣ ಹೋಮ ನಡೆಯಲಿದೆ. ಸೆ.30 ಬೆಳಗ್ಗೆ 9.00 ಗಂಟೆಗೆ ಚಂಡಿಕಾ ಹೋಮ ಮತ್ತು ಸಾಮೂಹಿಕ ಕುಂಕುಮಾರ್ಚನೆ, ಲಲಿತಾ ಪಂಚಮಿ ನಡೆಯಲಿದೆ. ಅ. 1 ರ ಅಕ್ಷರಾಭ್ಯಾಸ ಪ್ರಾರಂಭ ಆಗಲಿದೆ, ಅ.3 ದುರ್ಗಾಷ್ಠಮಿ ನಡೆಯಲಿದೆ . ಅ.4 ರಂದು ಮಹಾನವಮಿ, ಮಧ್ಯಾಹ್ನ ಮಹಾಪೂಜೆ, ಆಯುಧ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ಆಯುಧಪೂಜೆ ನಡೆಯಲಿದೆ. ಸೆ.5 ಬೆಳಗ್ಗೆ ಮಹಾಪೂಜೆ, ವಿಜಯದಶಮಿ, ಶಮಿಪೂಜೆ ನಡೆದು ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ನವಾನ್ನ ಭೋಜನ ನಡೆಯಲಿದೆ.
ಪ್ರತಿ ದಿನ ರಾತ್ರಿ ಗಂಟೆ 7-00ಂದ ಶ್ರೀ ದುರ್ಗಾ ಭಜನಾ ಮಂಡಳಿ ಮರಕತ, ನಡುಗಲ್ಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.