ಸುಳ್ಯ ಲಯನ್ಸ್ ಕ್ಲಬ್‌ಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಭೇಟಿ

0

 

 

ಸುಳ್ಯ ಲಯನ್ಸ್ ಕ್ಲಬ್‌ಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮವು ಅ.15 ರಂದು ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.

ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಸಚಿತ್ ರೈ ಹಾಗೂ ಅವರ ಪತಿ ಸಚಿತ್ ರೈ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿವಿಧ ಸೇವಾ ಯೋಜನೆಗಳನ್ನು ಹಾಗೂ ಫಲಾನುಭವಿಗಳಿಗೆ ದೇಣಿಗೆ ಹಸ್ತಾಂತರಿಸಿದರು. ವಿಶೇಷವಾಗಿ ಸುಳ್ಯ ಲಯನ್ಸ್ ಕ್ಲಬ್‌ನ ನಿಕಟಪೂರ್ವಾಧ್ಯಕ್ಷ ಜಯಂತ್ ರೈ ಅವರು 2010-11 ರಲ್ಲಿ ಸುಳ್ಯ ಕೆ.ಎಸ್.ಆರ್.ಟಿ.ಸಿ ಬಳಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ನವೀಕರಣಗೊಳಿಸಿ ಪ್ರಾಂತೀಯ ಅಧ್ಯಕ್ಷರು ಉದ್ಘಾಟಿಸಿದರು.

ನಂತರ ಲಯನ್ಸ್ ಸೇವಾ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಗಂಗಾಧರ ರೈ, ಪ್ರಾಂತೀಯ ರಾಯಭಾರಿ ಜಯಪ್ರಕಾಶ್ ರೈ, ಸುವರ್ಣ ವರ್ಷಾಚರಣೆ ಸಮಿತಿಯ ಸಂಚಾಲಕ ಜಾನ್ ವಿಲಿಯಂ ಲಸ್ರಾದೋ, ಝೋನು ಎನ್‌ವೈ ಲಿಜೋ ಜೋಸ್, ನಿಕಟಪೂರ್ವಾಧ್ಯಕ್ಷ ಆನಂದ ಪೂಜಾರಿ, ಮಣಿ ಮುಂಡೋಡಿ, ಜೋಸ್, ನಳಿನಿ ಕಿಶೋರ್ ಉಪಸ್ಥಿತರಿದ್ದರು. ಇದೇ ಸಂದರ್ಭ ಹೂವಯ್ಯ ಸೂಂತೋಡು ಸಂಪಾದಕತ್ವದ ಸುವರ್ಣ ರಶ್ಮಿ ಸೆಪ್ಟಂಬರ್ ತಿಂಗಳ ಸಂಚಿಕೆ ಇದೇ ಸಂದರ್ಭ ಬಿಡುಗಡೆಗೊಳಿಸಲಾಯಿತು. ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಾಶ್ರೀ ಜೆ.ರೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ ವರದಿ ವಾಚಿಸಿದರು. ಖಜಾಂಜಿ ಡಾ.ಲಕ್ಷೀಶ್ ವಂದಿಸಿದರು. ಗೀತ ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.