ಮೇನಾಲ ಕೃಷ್ಣ ಭಜನಾ ಮಂದಿರದಲ್ಲಿ ನಿಶಿ ಪೂರ್ಣ ಭಜನಾ ಸಂಕೀರ್ತನೆ

0

ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕೃಷ್ಣ ಭಜನಾ ‌ಮಂದಿರದಲ್ಲಿ ವಾರ್ಷಿಕವಾಗಿ ನಡೆಯುವ ನಿಶಿ ಪೂರ್ಣ ಭಜನಾ ಸಂಕೀರ್ತನೆಯು ಡಿ.4 ರಂದು ನಡೆಯಿತು. ಸಂಜೆ ಸೂರ್ಯಾಸ್ತಮಾನದಲ್ಲಿ ದೀಪ ಸ್ಥಾಪನೆಯಾಗಿ ಭಜನೆ ಆರಂಭಗೊಂಡಿತು. ತಾಲೂಕಿನ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ಮರುದಿನ ಪ್ರಾತ:ಕಾಲದವರೆಗೆ ನಿರಂತರವಾಗಿ ನಡೆಯಿತು. ಬಳಿಕ ಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆಯಾಯಿತು. ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಯಿತು.