ಸುಳ್ಯ ಎನ್ನೆoಪಿಯುಸಿಯ ವಿದ್ಯಾರ್ಥಿಗಳಿಗೆ ಬಹುಮಾನ

0

ಅಂಬಿಕಾ ಮಹಾ ವಿದ್ಯಾಲಯ ಪುತ್ತೂರು ಇವರು ಆಯೋಜಿಸಿದ ‘ಅನ್ವೇಷಣಾ -2022 ‘ಸಾಂಸ್ಕೃತಿಕ ಮತ್ತು ಸೃಜನಶೀಲ ಸ್ಪರ್ಧೆಗಳಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ಪ್ರ. ವಾಣಿಜ್ಯ ವಿಭಾಗದ ಯಶಸ್ ಎಂ ಗೀತಾ ಪ್ರಸ್ತುತಿಯಲ್ಲಿ (ಪ್ರಥಮ ), ದ್ವಿ ವಿಜ್ಞಾನ ವಿಭಾಗದ ನಿಶ್ವಿತಾ ಸುಗಮ ಸಂಗೀತದಲ್ಲಿ ( ದ್ವಿತೀಯ)ಪ್ರ. ವಿಜ್ಞಾನ ವಿಭಾಗದ  ಅಖಿಲೇಶ್.ಕೆ.ಮತ್ತು ಜಿ ಎಂ ಸೋಹನ್ ಭಿತ್ತಿ ಪತ್ರ ತಯಾರಿ ಸ್ಪರ್ಧೆಯಲ್ಲಿ ( ದ್ವಿತೀಯ )ಸ್ಥಾನ ಗಳಿಸಿದ್ದಾರೆ.