ಎಲಿಮಲೆ : ತಾಳೆ ಮತ್ತು ಕಾಳುಮೆಣಸು ಬೇಸಾಯ ಹಾಗೂ ಅಡಿಕೆ ಎಲೆ‌ಚುಕ್ಕೆ ರೋಗದ ಬಗ್ಗೆ ರೈತರಿಗೆ ತರಬೇತಿ

0

ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಸಹಯೋಗದೊಂದಿಗೆ ತಾಳೆ ಮತ್ತು ಕಾಳುಮೆಣಸು ಬೇಸಾಯ ಹಾಗೂ ಅಡಿಕೆ ಎಲೆ‌ಚುಕ್ಕೆ ರೋಗದ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ವು ಡಿ.10ರಂದು ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಸಭಾಭವನದಲ್ಲಿ ನಡೆಯಿತು.

ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಅಧ್ಯಕ್ಷತೆ ವಹಿಸಿದ್ದರು. ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಬೊಳ್ಳಾಜೆ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಸಹಕಾರಿ ಯೂನಿಯನ್‌ ಅಧ್ಯಕ್ಷ ರಮೇಶ್ ದೇಲಂಪಾಡಿ, ಉಪಾಧ್ಯಕ್ಷ ಜಯಪ್ರಕಾಶ್ ಸುಳ್ಳಿ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಉಪಾಧ್ಯಕ್ಷ ಧನಂಜಯ ಕುಮಾರ್ ಮುಖ್ಯ ಅತಿಥಿ ಯಾಗಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಡಿಸಿಆರ್ ಪುತ್ತೂರು ಇಲ್ಲಿಯ ವಿಜ್ಞಾನಿ ಶ್ರೀಮತಿ ಭಾಗ್ಯ, ಐಐಎಸ್ ಆರ್ ಕೇಂದ್ರ ಅಪ್ಪಂಗಳ ಮಡಿಕೇರಿ ಇದರ ಮುಖ್ಯಸ್ಥ ಅಂಕೇ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ರೈತರಿಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಅರ್ಬಣ್ಣ ಪೂಜಾರಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂತೋಷ್ ಎನ್. ಕಾರ್ಯಕ್ರಮ‌ ನಿರೂಪಿಸಿದರು.