ಸುಬ್ರಹ್ಮಣ್ಯ: ಆದಿಚುಂಚನಗಿರಿ ಸ್ವಾಮೀಜಿಗಳ ಆಗಮನ – ಪೂರ್ವಭಾವಿ ಸಭೆ

0

ಆದಿಚುಂಚನಗಿರಿ ಸಂಸ್ಥಾನದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಡಿ.20 ರಂದು ಸುಬ್ರಹ್ಮಣ್ಯಕ್ಕೆ ಆಗಮಿಸಲಿದ್ದು ಕಿಶೋರ್‍ ಕೂಜುಗೋಡು, ನಿತ್ಯಾನಂದ ಮುಂಡೋಡಿ ಮನೆಗೆ ಭೇಟಿಯಾಗಿ ಎ.ವಿ ತೀರ್ಥರಾಮರ ಮನೆಯಲ್ಲಿ ವಾಸ್ತ್ಯವ್ಯ ಹೂಡಲಿದ್ದಾರೆ. ಈ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಡಿ.9 ರಂದು ಸುಬ್ರಹ್ಮಣ್ಯ ಗ್ರಾ.ಪಂ ಸಭಾಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಸ್ವಾಮೀಜಿಗಳ ಪಾದಪೂಜೆ ಮತ್ತು ಗುರು ಕಾಣಿಕೆ ಅರ್ಪಿಸುವ ಕಾರ್ಯಕ್ರಮದಲ್ಲಿ, ಸಮರ್ಪಕ ವ್ಯವಸ್ಥೆಗಾಗಿ ವಿವಿಧ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.


ಆದಿಚುಂಚನಗಿರಿ ಸಂಸ್ಥಾನದ ಮಂಗಳೂರು ಶಾಖೆಯ ಮಠಾಧೀಶರಾದ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ತಿಲಕ್ ವಹಿಸಿದ್ದರು. ಕಡಬ ತಾಲೂಕು ಗೌಡ ಸಮಿತಿ ಅಧ್ಯಕ್ಷ ಸುರೇಶ್ ಬೈಲು,
ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಟಾರ್, ಎ ವಿ ತೀರ್ಥರಾಮ, ನಿತ್ಯಾನಂದ ಮುಂಡೋಡಿ, ಪುತ್ತೂರು ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ, ಕಿರಣ್ ಬುಡ್ಲೆಗುತ್ತು, ಕಿರಣ್ ಹೊಸೊಳಿಕೆ, ಸುಬ್ರಹ್ಮಣ್ಯ ಗ್ರಾಮ ಸಮಿತಿಯ ಲೊಕೇಶ್ ಬಳ್ಳಡ್ಕ, ಪ್ರಭಾಕರ ಪಡ್ರೆ, ಮತ್ತಿತರರು ವೇದಿಕೆಯಲ್ಲಿದ್ದರು. ಸ್ಥಳೀಯ ಗ್ರಾಮಗಳ ಗೌಡ ಸಮಿತಿಯವರು ಮತ್ತಿತರರು ಉಪಸ್ಥಿತರಿದ್ದರು.
ಗಿರಿಧರ್ ಸ್ಕಂದ ಸ್ವಾಗತಿಸಿದರು.