ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಗುಂಡಿಹಿತ್ಲು ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಪರಿವಾರ ದೈವಗಳ ಹರಕೆಯ ನೇಮೋತ್ಸವ ಜ.25 ಜ.26 ರಂದು ನಡೆಯಲಿದೆ.
ಜ.25 ಬೆಳಿಗ್ಗೆ ಗಣಪತಿ ಹವನ ನಂತರ ನಾಗ ತಂಬಿಲ ನಡೆದು ಪರಿವಾರ ದೈವಗಳ ತಂಬಿಲ ನಡೆಯಲಿದೆ. ಬೆಳಿಗ್ಗೆ ಗಂಟೆ 10 ರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ಜ.26 ರ ಬೆಳಗ್ಗೆ ಪರಿವಾರ ದೈವಗಳ ಹರಕೆಯ ನೇಮೋತ್ಸವ ನಡೆಯಲಿದೆ.