ಪೈಚಾರಿನಲ್ಲಿ ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರ

0

ಸಿಟಿ ಕ್ಲಿನಿಕ್ ಪೈಚಾರು ಇವರ ಆಶ್ರಯದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜ. 26 ರಂದು ಪೈಚಾರಿನ ಸಿಟಿ ಕ್ಲಿನಿಕ್ ಆವರಣದಲ್ಲಿ ನಡೆಯಿತು.

ಮಂಗಳೂರಿನ ಖ್ಯಾತ ವೈದ್ಯರಾದ ಡಾ. ನರಸಿಂಹ ಶಾಸ್ತ್ರಿ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ವೈದ್ಯಕೀಯ ತಪಾಸಣಾ, ಇಸಿಜಿ, ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ, ಲ್ಯಾಬೋರೇಟರಿ ಪರೀಕ್ಷೆಗಳನ್ನು ನಡೆಸಲಾಯಿತು.

ಸುವಾಚ ಲ್ಯಾಬೋರೇಟರಿ ಶಿಬಿರಕ್ಕೆ ಸಹಕಾರ ನೀಡಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.