ಮಡಪ್ಪಾಡಿ : ಕಿರು ಸೇತುವೆ ಉದ್ಘಾಟನೆ

0

ಮಾಡಪಾಡಿ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಬಳಿಯಲ್ಲಿ ಮಡಪ್ಪಾಡಿ ಗ್ರಾ.ಪಂ. ಅನುದಾನದಿಂದ ನಿರ್ಮಿಸಲಾದ ಕಿರು ಸೇತುವೆಯನ್ನು ಜ.25 ರಂದು ಗ್ರಾ.ಪಂ. ಅಧ್ಯಕ್ಷ ಮಿತ್ರ ದೇವ ಮಡಪ್ಪಾಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಕಾರ್ಯದರ್ಶಿ ಸೋಮಶೇಖರ ಕೇವಳ, ಗೌರವ ಸಲಹೆಗಾರರು ಹಾಗೂ ಪೂಜಾರಿಯವರಾದ ಚಂದ್ರಶೇಖರ ಗುಡ್ಡೆಮನೆ, ಭಂಡಾರ ಮನೆಯ ಮಡಪ್ಪಾಡಿ ಕುಶಾಲಪ್ಪ ಗೌಡ, ಮಡಪ್ಪಾಡಿ ರಾಮಕೃಷ್ಣ ಗೌಡ, ಕಿರಣ್ ಎಂ.ಜಿ., ಚಿದಾನಂದ ಎಂ.ಜಿ. ಹೊನ್ನಪ್ಪ ಗೌಡ ಮಡಪ್ಪಾಡಿ, ಪುರುಷೋತ್ತಮ ಗುತ್ತಿಗಾರು, ಮಹೇಶ್ ಮಡಪ್ಪಾಡಿ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.