ರೋಟರಿ ಕ್ಲಬ್‌ನಿಂದ ಈ ವರ್ಷ ವನಸಿರಿ, ಜಲಸಿರಿ, ವಿದ್ಯಾಸಿರಿ ಮತ್ತು ಆರೋಗ್ಯ ಸಿರಿ ಕಾರ್ಯಕ್ರಮಗಳಿಗೆ ಆದ್ಯತೆ

0

ಪತ್ರಿಕಾಗೋಷ್ಠಿಯಲ್ಲಿ ರೋಟರಿ 3181 ಜಿಲ್ಲಾ ಗವರ್ನರ್ ರೊ. ಪ್ರಕಾಶ್ ಕಾರಂತ್ ಪ್ರಕಟ



ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷರ ಆಶಯದಂತೆ ಪರಿಸರ ಸಂರಕ್ಷಣೆಗಾಗಿ ಮತ್ತು ಪರಿಸರ ಅಭಿವೃದ್ಧಿಗಾಗಿ ವನಸಿರಿ, ಜಲಸಿರಿ, ವಿದ್ಯಾಸಿರಿ ಮತ್ತು ಆರೋಗ್ಯ ಸಿರಿ ಯೋಜನೆಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ರೋಟರಿ ಜಿಲ್ಲೆ ೩೧೮೧ರ ಗವರ್ನರ್ ರೊ. ಮೇಜರ್ ಡೋನರ್ ಪ್ರಕಾಶ್ ಕಾರಂತ್ ತಿಳಿಸಿದ್ದಾರೆ.
ಇಂದು ಸುಳ್ಯ ರೋಟರಿ ಕ್ಲಬ್‌ಗೆ ಅಧಿಕೃತ ಬೇಟಿ ಕಾರ್ಯಕ್ರಮಕ್ಕಾಗಿ ಸುಳ್ಯಕ್ಕೆ ಬಂದಿದ್ದ ಅವರು ರೊ. ಮಧುಸೂದನ್ ಕುಂಭಕ್ಕೋಡು ಮತ್ತು ರೊ. ಶ್ರೀಮತಿ ಲತಾ ಮಧುಸೂದನ್‌ರವರ ಹಳೆಗೇಟು ಓಡಬಾಯಿಯ ಮನೆಯಲ್ಲಿ ಪತ್ರಕರ್ತರನ್ನುದ್ಧೇಶಿಸಿ ಮಾತನಾಡಿದರು.
ರೋಟರಿ ಕ್ಲಬ್ ಮತ್ತು ಕಾರ್ಯಕ್ರಮಗಳ ಬಗ್ಗೆ ರೊ. ಪ್ರಕಾಶ್ ಕಾರಂತ್ ಹೇಳಿದ ವಿವರಗಳು ಈ ಕೆಳಗಿನಂತಿವೆ.

ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ/ ಚಂದ್ರಶೇಖರ ಪೇರಾಲು, ವಲಯಾಧಿಕಾರಿ ರೊ. ಶಿವರಾಮ ಏನೆಕಲ್ಲು, ವಲಯ ಸೇನಾನಿ ರೊ. ಪ್ರೀತಂ ಡಿ.ಕೆ., ನಿಯೋಜಿತ ಅಧ್ಯಕ್ಷ ರೊ. ಆನಂದ ಗೌಡ ಖಂಡಿಗ, ಹಿರಿಯ ಸದಸ್ಯ, ಮೇಜರ್ ಡೋನರ್ ರೊ. ಆಗ್ರೋ ರಾಮಚಂದ್ರ, ಕಾರ್ಯದರ್ಶಿ ರೊ. ಶ್ರೀಮತಿ ಮಧುರಾ ಎಂ.ಆರ್. ಮತ್ತು ರೊ. ಭಾಸ್ಕರ ನಾಯರ್ ಉಪಸ್ಥಿತರಿದ್ದರು.