ಪ್ರಸಿದ್ಧ ಎಣ್ಮೂರು ಮಖಾಂ ಊರೂಸ್ ಆರು ದಿನಗಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಪನ

0

ಸುಳ್ಯ ತಾಲೂಕಿನ ಐತಿಹಾಸಿಕ ಎಣ್ಣೂರು ವಲಿಯುತ್ತುಲ್ಲಾಹಿಮಶ್‌ಹೂ ರತ್ ಬೀವಿ ರವರ ಉರೂಸ್
ಸಮಾರಂಭ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಜನವರಿ 30 ರಂದು ಆರಂಭಗೊಂಡು
ವಿಜೃಂಭಣೆಯಿಂದ ನಡೆದು ಫೆಬ್ರವರಿ 4ರಂದು ಸಮಾಪನಗೊಂಡಿತು.

ಉರೂಸ್ ಆರಂಭದ ಪ್ರಥಮ ದಿನವಾದ ಜ 30 ರಂದು ಬೆಳಿಗ್ಗೆ 9:30ಕ್ಕೆ ಎಣ್ಣೂರು ಐವತ್ತೊಕ್ಲು ರಹ್ಮಾನಿಯ ಕೇಂದ್ರ ಜುಮಾ ಮಸೀದಿ ಗೌರವಾಧ್ಯಕ್ಷ ಹಾಜಿ ಕುಂಞಿಪಳ್ಳಿ ಧ್ವಜಾರೋಹಣ ನೆರವೇರಿ ಚಾಲನೆ ನೀಡಿದರು.
ಅಂದು ರಾತ್ರಿ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಿತು.


ಖ್ಯಾತ ಪಂಡಿತರಾದ ಅಸ್ಸಯ್ಯಿದ್ ಝೈನುಲ್ ಅಬಿದೀನ್ ತಂಜಳ್ ದುಗಲಡ್ಕರವರು ದುವಾಶೀರ್ವಚನ ನೀಡಿ ಕಾರ್ಯಕ್ರಮವನ್ನು
ಉದ್ಘಾಟಿಸಿದರು.
ಮುಖ್ಯ ಪ್ರಭಾಷಣವನ್ನು ಖ್ಯಾತವಾಗ್ಮಿಯು.ಕೆ ಮುಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮಾಡಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಜುಮ್ಮಾ ಮಸೀದಿ ಅಧ್ಯಕ್ಷ ಟಿ ಎಸ್ ಸುಲೈಮಾನ್ ವಹಿಸಿದ್ದರು.
ವೇದಿಕೆಯಲ್ಲಿ ಮುಖಂಡರುಗಳಾದ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಇಸ್ಮಾಯಿಲ್ ಪಡ್ಪಿನಂಗಡಿ, ಉಮರ್ ಸೀಗೆಯಡಿ, ಮೊಹಮ್ಮದ್ ಝಿಯಾದ್ ಸಕಾಫಿ, ಸಮ್ಸುದ್ದೀನ್ ಫಾರೂಕಿ ಮೊದಲಾದವರು ಉಪಸ್ಥಿತರಿದ್ದರು.
ಜ 31 ರಂದು ನಡೆದ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ಖ್ಯಾತ ಪ್ರಭಾಷಣಕಾರ ಪೇರೋಡ್ ಮುಹಮ್ಮದ್ ಅಝ್ಹರಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಹಾಜಿ ಇಸ್ಮಾಯಿಲ್ ಇಂದ್ರಾಜೆ, ಮೊಹಮ್ಮದ್ ರಫೀಕ್ ಅಂಜದಿ, ಅಬ್ದುಲ್ ಖಾದರ್ ಕೊಳ್ತಂಗರೆ ಮೊದಲಾದವರು ಉಪಸ್ಥಿತರಿದ್ದರು.
ಫೆಬ್ರವರಿ 1 ರಂದು
ಮುಖ್ಯ ಪ್ರಭಾಷಣವನ್ನು ಖ್ಯಾತ ವಾಗ್ಮಿ ನವಾಝ್ ಮನ್ನಾನಿ ತಿರುವನಂತಪುರಂ ನಿರ್ವಹಿಸಿದರು.
ವೇದಿಕೆಯಲ್ಲಿ ಮುಖಂಡರುಗಳಾದಇಬ್ರಾಹಿಂ ಎಂಜೀರು,ಅನ್ಸಾರ್ ಫಾಳಿಲಿ, ಹೈದರ್ ಅಲಿ ಐವತೊಕ್ಲು ಮೊದಲಾದವರು ಉಪಸ್ಥಿತರಿದ್ದರು.

ಫೆಬ್ರವರಿ 2 ರಂದು
ಮುಖ್ಯ ಪ್ರಭಾಷಣಕಾರರಾಗಿ ಸಿ.ಹೆಚ್ ರಾಶೀದ್ ಬುಖಾರಿ
ಭಾಗವಹಿಸಿದ್ದರು.
ಅಂದಿನ ವೇದಿಕೆಯಲ್ಲಿ ಮುಖಂಡರಾದ ಅಬ್ದುಲ್ ರಹಮಾನ್ ಹಾಜಿ, ಶರೀಫ್ ಸಅದಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಫೆಬ್ರವರಿ 3 ರಂದು
ಸಂಜೆ ಅಸರ್ ನಮಾಝಿನ ನಂತರ ಪಳ್ಳಿ ನೇರ್ಚೆ ಮತ್ತು ಮೌಲೂದ್ ಪಾರಾಯಣ ನಡೆಯಿತು.
ಬಳಿಕ ಸಾಮೂಹಿಕ ಪ್ರಾರ್ಥನೆ ನಡೆದು ನೂರಾರು ಮಂದಿ ಝಿಯಾರತ್ ಪ್ರಾರ್ಥನೆ ನಡೆಸಿದರು.
ರಾತ್ರಿ 7 :30ಕ್ಕೆ
ಮುಖ್ಯ ಪ್ರಭಾಷಣವನ್ನು ಮುಸ್ತಫಾ ಸಖಾಫಿ ತನ್ನಾಲ ನಿರ್ವಹಿಸಿದರು.
ವೇದಿಕೆಯಲ್ಲಿ ಅಬ್ದುಲ್ ರಝಖ್ ಹಿಮಮಿ, ಸಿದ್ದೀಖ್ ಮುಚ್ಚಿಲ, ಅಬೂಬಕ್ಕರ್ ಸಅದಿ,ಅಝೀಜ್ ಮುಸ್ಲಿಯರ್, ಮೊದಲಾದವರು ಉಪಸ್ಥಿತರಿದ್ದರು.
ಫೆಬ್ರವರಿ 4 ರಂದು ಉರಸ್ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆದು ಆರು ದಿನಗಳ ವಿಜೃಂಭಣೆಯ ಊರೂಸ್ ಕಾರ್ಯಕ್ರಮ ಸಂಪನ್ನಗೊಂಡಿತು.
ಅಂದು ರಾತ್ರಿ7:30ಕ್ಕೆ
ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಜಳ್
ಅಲ್ ಬುಖಾರಿ, ಎಣ್ಣೂರು-ಮುಚ್ಚಿಲ ರವರು ದುವಾಶಿರ್ವಾಚನ ನೀಡಿ ಸಾಮೂಹಿಕ ದುವಾ ಪ್ರಾರ್ಥನೆ ನಡೆಸಿದರು.
ಮಹಮ್ಮದ್ ಮುಸ್ತಫಾ ಸಅದಿ ಕೊಳ್ತಂಗರೆ ಅಧ್ಯಕ್ಷರು ಉರೂಸ್ ಸಮಿತಿ ಎಣ್ಮೂರು ಐವತ್ತೊಕ್ಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಪ್ರಭಾಷಣಕಾರರಾಗಿ ಹಂಝ ಮಿಸ್ಬಾಹಿ ಓಟೆಪದವು ಭಾಗವಹಿಸಿ ಉರೂಸ್ ಕಾರ್ಯಕ್ರಮದ ಕುರಿತು ಅರ್ಥ ಗಂಭೀರ ಪ್ರಭಾಷಣವನ್ನು ಮಾಡಿದರು.
ವೇದಿಕೆಯಲ್ಲಿ ಮುಖ್ಯ ಅಥಿತಿಗಳಾಗಿ
ಅನೀಸ್ ಕೌಸರಿ ಪ್ರಾಧ್ಯಾಪಕರು ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ,ಅಬ್ದುಲ್ ಹಮೀದ್ ಅಹ್ಸನಿ ಆಲ್ ಆಫ್‌ಲಲಿ ಮುದರ್ರಿಸ್ ಬಿ.ಜೆ.ಎಂ ಮುಚ್ಚಿಲ,ಜಾಫರ್ ಸಹದಿ ಖತೀಬರು ಬದ್ರಿಯಾ ಜುಮಾ ಮಸ್ಜಿದ್ ಕಜೆ ನಿಂತಿಕಲ್ಲು, ಮುಖಂಡರುಗಳಾದ ಹಮೀದ್ ಹಾಜಿ ಬೈತಡ್ಕ, ಉಸ್ಮಾನ್ ಹಾಜಿ ಚೆನ್ನಾವರ, ಹಾಜಿ ಕೆಎಂ ಮುಸ್ತಫ ಜನತಾ, ಅಬ್ದುಲ್ ಗಪೂರ್ ಕಲ್ಮಡ್ಕ, ಇಕ್ಬಾಲ್ ಎಲಿಮಲೆ, ಅಶ್ರಫ್ ಖಾನ್ ಮಾಂತೂರು, ಅಬೂಬಕ್ಕರ್ ಮಂಗಳ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಮಹಮದ್ ಬೆಳ್ಳಾರೆ ಶಾಹಿನ್ ಮಾಲ್, ಹಮೀದ್ ಕುತ್ತಮೊಟ್ಟೆ ಸುಳ್ಯ ,ಲತೀಫ್ ಹರ್ಲಡ್ಕ ಸುಳ್ಯ, ಅಬ್ದುಲ್ ರಜ್ಜಾಕ್ ಹಾಜಿ ರಾಜಧಾನಿ ಮಹಮ್ಮದ್ ಎಎಂ, ಮೂಸ ಹಾಜಿ ಸುಂಕದಕಟ್ಟೆ, ಮಮ್ಮಾಲಿ ಹಾಜಿ ಬೆಳ್ಳಾರೆ ಹಾಗೂ ಇನ್ನೂ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.
ಸಮಾರೋಪ ದಿವಸ ಅನ್ನದಾನ ತಬರ್ರುಕ್ ವಿತರಣೆ ನಡೆಯಿತು. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಊರೂಸ್ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಮಸೀದಿಗಳಾದ ಎಣ್ಮೂರು ಐವತ್ತೊಕ್ಲು, ಬದ್ರಿಯಾ ಜುಮಾ ಮಸ್ಜಿದ್ ನೆಕ್ಕಿಲ, ಬದ್ರಿಯಾ ಜುಮಾ ಮಸ್ಜಿದ್ ಕಜೆ ನಿಂತಿಕಲ್ಲು, ಖಿಲ್ ರಿಯಾ ಜುಮಾ ಮಸ್ಜಿದ್ ಕರಿಂಬಿಲ, ಬದ್ರಿಯಾ ಜುಮ್ಮಾ ಮಸ್ಜಿದ್ ಇಂದ್ರಾಜೆ, ಗೌಸಿಯ ಜುಮಾ ಮಸ್ಜಿದ್ ಅಲೆಕ್ಕಾಡಿ ಇದರ ಅಧ್ಯಕ್ಷರು ಸರ್ವ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರ್ವ ಸದಸ್ಯರ ಸಹಕಾರದಿಂದ ಮಸೀದಿಪರಿಸರದ ಮತ್ತು ಮುಖ್ಯ ರಸ್ತೆಗಳನ್ನು ದೀಪಾಲಂಕಾರದಿಂದ ಸಜ್ಜುಗೊಳಿಸಲಾಗಿತ್ತು.