ಪಂಜ: ಮನೆ ಮಾಲಕರ ಕೊಲೆಗೆ ಕೆಲಸದವರಿಂದಲೇ ಯತ್ನ: ಇಬ್ಬರ ಬಂಧನ

0

ದರೋಡೆ ಯತ್ನ ವಿಫಲ : ಮಹಿಳೆಗೆ ಇರಿದ ಗಾಯ

ಪಂಬೆತ್ತಾಡಿ ಗ್ರಾಮದ ಕರಿಕ್ಕಳ ವಿಶ್ವನಾಥ ಮತ್ತು ಗಾಯತ್ರಿ ದಂಪತಿ ಮನೆಗೆ ಕೆಲಸಕ್ಕೆ ಬಂದವರು ಆಕ್ರಮಣ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಈ ವೇಳೆ ಮನೆಯವರು ಬೊಬ್ಬೆ ಹೊಡೆದ ಪರಿಣಾಮ ಅಕ್ಕಪಕ್ಕದ ಮನೆಯವರು ಬಂದ ಕಾರಣ ಅಪಾಯ ಉಂಟಾಗಲಿಲ್ಲ. ಘಟನೆ ಸಂಬಂಧಿಸಿ ವರದರಾಜ್ ಮತ್ತು ಸೈಜನ್ ಎಂಬುವರನ್ನು ಸುಬ್ರಮಣ್ಯ ಪೊಲೀಸರು ಬಂಧಿಸಿದ್ದಾರೆ. ಗಾಯತ್ರಿಯವರ ಕುತ್ತಿಗೆಗೆ ಇರಿದ
ಗಾಯವಾಗಿದ್ದು ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.


ಮನೆಯ ಮಹಡಿ ಮೇಲೆ ಏರಿ ಕೃತ್ಯ ಎಸಗಿದ್ದಾರೆ.ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಮನೆಯಲ್ಲಿ ಹಣವಿರುವ ವಿಚಾರ ಆರೋಪಿಗಳ ತಿಳಿದಿತ್ತು.ಮನೆಯವರನ್ನು ಮುಗಿಸಿ
ದರೋಡೆ ನಡೆಸುವ ಆರೋಪಿಗಳ ಯೋಜನೆ ಆಗಿತ್ತು ಎನ್ನಲಾಗಿದೆ. ಸೈಜನ್ ಧರ್ಮಸ್ಥಳ ಹೊಸ ಬಸ್ ತಂಗುದಾಣ ಬಳಿ ನಿವಾಸಿ. ವರದರಾಜ್ ಚಿತ್ರದುರ್ಗದ ಹಿರಿಯುರು ನಿವಾಸಿ.ಇವರಿಬ್ಬರು ಕೆಲವು ತಿಂಗಳ ಹಿಂದೆಯಷ್ಟೇ ಮನೆ ಕೆಲಸಕ್ಕಾಗಿ ಬಂದಿದ್ದರು.