ನಡುಗಲ್ಲು – ಕೊಲ್ಲಮೊಗ್ರು ರಸ್ತೆ ಫಯರ್ ಲೈನ್ ಅರ್ಧದಲ್ಲಿ!?

0

ಅಲ್ಲಲ್ಲಿ ಬೆಂಕಿ ಬಿದ್ದು ಅರಣ್ಯ ನಾಶವಾಗುತ್ತಿರುವುದು ನಡೆಯುತಿರುವುದು ವರದಿಯಾಗುತಿದ್ದು ಈ ಮಧ್ಯೆ ನಡುಗಲ್ಲು ಹರಿಹರ ಕೊಲ್ಲಮೊಗ್ರು ರಸ್ತೆಯ ಫಯರ್ ಲೈನ್ ಕೆಲಸ ಅರ್ಧದಲ್ಲಿ ಬಾಕಿ ಇರುವುದಾಗಿ ವರದಿಯಾಗಿದೆ.


ಅರಣ್ಯ ಇಲಾಖೆ ವತಿಯಿಂದ ನಡುಗಲ್ಲು ಹರಿಹರ ರಸ್ತೆಯ ಬಾರಡ್ಕ ದ ವರೆಗೆ ರಸ್ತೆಯ ಎರಡೂ ಬದಿ ಕಾಡು ಕಡಿದು ಬೆಂಕಿ ಹಾಕಿ ಬೆಂಕಿ ಹರಡದಂತೆ ಬೆಂಕಿ ಲೈನ್ ಮಾಡಲಾಗಿದೆ. ಅಲ್ಲಿಂದ ರಸ್ತೆ ಎರಡೂ ಬದಿ ಹಲವು ಕಿ.ಮೀ ಕೊಲ್ಲಮೊಗ್ರು ಫಯರ್ ಲೈನ್ ನಿರ್ಮಿಸಲು ಉಳಿಸಿಕೊಂಡಿದೆ. ಈ ಭಾಗದಲ್ಲಿ ವಿದ್ಯುತ್ ಲೈನ್ ಹಾದುಹೋಗುತಿದೆ. ಅಲ್ಲದೆ ಇತರೇ ಮೂಲಗಳಿಂದ ಬೆಂಕಿ ಹತ್ತಿಕೊಂಡರೆ ಅಪಾಯ ಸಂಭವಿಸಬಹುದು. ಅರಣ್ಯ ಇಲಾಖೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ವಿನಂತಿಸಿದ್ದಾರೆ.