ಪಂಜದಲ್ಲಿ ಯಕ್ಷಗಾನ ತಾಳ ಮದ್ದಳೆ ಸಪ್ತಾಹ-ಉದ್ಘಾಟನೆ

0


“ಯಕ್ಷಗಾನ ಸಂಸ್ಕಾರ ,ಸಂಸ್ಕೃತಿ ಬೆಳೆಸುವ ಕಲೆ’- ಪದ್ಮನಾಭ ಗೌಡ ಪಾದೆ

ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಪಂಜ ಇದರ ಆಶ್ರಯದಲ್ಲಿ ಯುಗಾದಿ ವಿಶೇಷ ತಾಳ ಮದ್ದಳೆ ಸಪ್ತಾಹ ಮಾ. 22ರಂದು ಪಂಜ ಶಾರದಾಂಬಾ ಸಭಾಭವನ ನಡೆಯಿತು.


ನಿವೃತ್ತ ಅಧ್ಯಾಪಕ ಪದ್ಮನಾಭ
ಗೌಡ ಪಾದೆ ದೀಪ ಪ್ರಜ್ವಲನೆ
ಗೊಳಿಸಿ ಉದ್ಘಾಟಿಸಿ ಮಾತನಾಡಿ
“ಯಕ್ಷಗಾನ ಕಲೆಯು ನಮ್ಮದೇ ಆದ ಸಂಸ್ಕಾರ ,ಸಂಸ್ಕೃತಿ ಬೆಳೆಸಲು
ಪ್ರೇರಣೆ ನೀಡುತ್ತದೆ.”
ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಬಾಲಕೃಷ್ಣ ಪುತ್ಯ ಸಭಾಧ್ಯಕ್ಷತೆ ವಹಿಸಿದ್ದರು.
ಭಜನಾ ಮಂಡಳಿ ಪೂರ್ವಾಧ್ಯಕ್ಷ ಮಹಾಲಿಂಗ ಸಂಪ , ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಪೂವಪ್ಪ ಚಿದ್ಗಲ್,ಯಕ್ಷಗಾನ ಭಾಗವತ ಪ್ರಶಾಂತ್ ರೈ ಮುಂಡಾಲಗುತ್ತು, ಯಕ್ಷಗಾನ ಕಲಾ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ತಿಮ್ಮಪ್ಪ ಕೂತ್ಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪ್ರಶಾಂತ್ ರೈ ಮುಂಡಾಲಗುತ್ತು ಸ್ವಾಗತಿಸಿದರು ಮತ್ತು ವಂದಿಸಿದರು.
ತಾಳಮದ್ದಳೆ ಪ್ರಸಂಗ ಕನ್ಯಾಂತರಂಗ ಜರುಗಿತು.ಭಾಗವತರಾಗಿ ಪ್ರಶಾಂತ್ ರೈ ಮುಂಡಾಲಗುತ್ತು, ಕು. ರಚನಾ ಚಿದ್ಗಲ್, ಚೆಂಡೆ ಮತ್ತು ಮದ್ದಲೆ ಕುಮಾರ ಸುಬ್ರಮಣ್ಯ ವಳಕುಂಜ, ಜನಾರ್ಧನ ತೋಳ್ಪಡಿತ್ತಾಯ ಉಜಿರೆ, ಅರ್ಥದಾರಿಗಳಾಗಿ ರಾಧಾಕೃಷ್ಣ ಕಲ್ಚಾರ್ , ಗಣರಾಜ್ ಕುಂಬ್ಳೆ, ವೆಂಕಟೇಶ್ ಕುಮಾರ್ ಉಳುವಾನ, ಕೃಷ್ಣಮೂರ್ತಿ ಕೊಯಿಲ ಪಾಲ್ಗೊಂಡಿದ್ದರು.