ನಿಂತಿಕಲ್ಲಿನಲ್ಲಿ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಉದ್ಘಾಟನೆ

0

ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ 4ನೇ ನೂತನ ಶಾಖೆ ನಿಂತಿಕಲ್ಲಿನ ಸಾಧನಾ ಸಹಕಾರ ಸೌಧದಲ್ಲಿ ಇಂದು ಉದ್ಘಾಟನೆಗೊಂಡಿತು.
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ.ಆಪರೇಟ್ವಿ ಸೊಸೈಟಿ ಅಧ್ಯಕ್ಷ ಕೆ. ಜೈರಾಜ್ ಬಿ ರೈ ನೂತನ ಶಾಖೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾದೋಡಿ ಸಭಾಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಭದ್ರತಾ ಖಜಾನೆಯನ್ನು ಮತ್ತು ಶ್ರೀಧರ ರೈ ಮಾದೋಡಿ ಗಣಕಯಂತ್ರವನ್ನು ಉದ್ಘಾಟಿಸಿದರು. ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಗೌಡ ಹೆಚ್ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.‌ ಸೀತಾರಾಮ ರೈ ಸವಣೂರು, ಪ್ರಗತಿಪರ ಕೃಷಿಕರಾದ ರಮೇಶ್ ಕೋಟೆ ಮತ್ತು ಮಾಜಿ ತಾ.ಪಂ. ಸದಸ್ಯ ಅಬ್ದುಲ್ ಗಫೂರ್ ಭಾಗವಹಿಸಿದ್ದರು. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.‌ ಸೀತಾರಾಮ ರೈ ಸವಣೂರು ಮತ್ತು ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರಿಗೆ ಸನ್ಮಾನಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ಜೈರಾಜ್ ಭಂಡಾರಿ ನೋಣಾಲು ಸವಣೂರು ಸೀತಾರಾಮ ರೈಯವರ ಸನ್ಮಾನ ಪತ್ರ ವಾಚಿಸಿದರು. ಪುರಂದರ ರೈ ಚನಿಲ ತಿಮ್ಮಪ್ಪ ಶೆಟ್ಟಿಯವರ ಸನ್ಮಾನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಎ. ಲಕ್ಷ್ಮೀನಾರಾಯಣ ರೈ ಶೆಟ್ಟಿ ಅರಿಯಡ್ಕ ಸ್ವಾಗತಿಸಿದರು. ನಿರ್ದೇಶಕ ಜಯರಾಮ ರೈ ನುಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಸ್ವಸ್ತಿ ಮತ್ತು ಕು. ಪ್ರೀತಿ ಪ್ರಾರ್ಥಸಿದರು. ಪ್ರಗತಿ ಆಂಗ್ಲ ಮಾದ್ಯಮ ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

ಸಂಘದ ನಿರ್ದೇಶಕರಾದ ದಯಾನಂದ ರೈ ಮನವಳಿಕೆಗುತ್ತು, ಕೆ. ವಸಂತ ಕುಮಾರ್ ರೈ ದುಗ್ಗಳ, ಬೂಡಿಯಾರು ರಾಧಾಕೃಷ್ಣ ರೈ, ಸಂಜೀವ ಆಳ್ವ ಪಿ. ಹಾರಾಡಿ, ಚನಿಲ ತಿಮ್ಮಪ್ಪ ಶೆಟ್ಟಿ, ಪುರಂದರ ರೈ ಮಿತ್ರಂಪಾಡಿ, ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ಶ್ರೀಮತಿ ದಿವ್ಯಾ ಪ್ರಸಾದ್ ಅಳ್ವ ಆಳ್ವರಮನೆ ಉಪ್ಪಳಿಗೆ, ಶ್ರೀಮತಿ ಅನಿತಾ ಹೆಚ್ ಶೆಟ್ಟಿ ಕಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು, ನಿಂತಿಕಲ್ಲು ಶಾಖಾ ವ್ಯವಸ್ಥಾಪಕರಾದ ಪ್ರೀತಮ್ ಶೆಟ್ಟಿ, ಸಿಬ್ಬಂದಿಗಳಾದ ಶ್ರೀಮತಿ ವಿಮರ್ಶಾ ರೈ, ಶ್ರೀಮತಿ ಪ್ರಣೀತಾ ರೈ ಸಹಕರಿಸಿದರು.

ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈಯವರನ್ನು ಹಾರ ಹಾಕಿ ಈ ಸಂದರ್ಭದಲ್ಲಿ ಗೌರವಿಸಲಾಯಿತು.