ಪ್ರಾಕೃತಿಕ ವಿಕೋಪ : ಸುಳ್ಯದಲ್ಲಿ ಮುಂಜಾಗ್ರತಾ ಸಭೆ

0

ಗ್ರಾಮ ವಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಿ – ಮೋರಿ, ಚರಂಡಿ ಸ್ವಚ್ಚತೆ ಆದ್ಯತೆ – ನೀರು ಸರಾಗವಾಗಿ ಹರಿಯುವಂತೆ ಕ್ರಮಕ್ಕೆ ಸೂಚನೆ

ಪ್ರಾಕೃತಿಕ ವಿಕೋಪದ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳ ಸಭೆಯು ತಾಲೂಕು ಪಂಚಾಯತ್ ನಲ್ಲಿ ತಹಶಿಲ್ದಾರ್ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಮೇ.24 ರಂದು ನಡೆಯಿತು. ತಾಲೂಕು ಪಂಚಾಯತ್ ಇ.ಒ. ಭವಾನಿಶಂಕರ್ ವೇದಿಕೆಯಲ್ಲಿದ್ದರು.

ಪ್ರಾಕೃತಿಕ ವಿಕೋಪ ಸಂಭವಿಸುವ ಸಂದರ್ಭ ಗ್ರಾಮ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ದೀರ್ಘ ಚರ್ಚೆಗಳು ನಡೆದವು. ಪ್ರಾಕೃತಿಕ ವಿಕೋಪ ಆದಾಗ ತಕ್ಷಣ ಕ್ರಮ ಕೈಗೊಳ್ಳುವಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒ ಗಳು ತಮ್ಮ ತಂಡವನ್ನು ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ‌ಸಮಿತಿ‌ರಚನೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಯಿತು.
ಅಪಾಯಕಾರಿ‌ ಮರಗಳನ್ನು‌ ಕಡಿಯುವುದು. ಚರಂಡಿ, ಮೋರಿಗಳನ್ನು‌ಸ್ವಚ್ಚತೆ ಮಾಡಿ‌ನೀರು‌ ಸರಾಗವಾಗಿ ಹರಿಯುವಂತೆ‌ ಮಾಡಬೇಕು. ಅಗತ್ಯ ಬಿದ್ದರೆ ಕಾಳಜಿ‌ ಕೇಂದ್ರ ಆಭಿಸಬೇಕು. ಗುಡ್ಡ ಜರಿತ ಸಂಭವಿಸಬಹುದಾದ ಪ್ರದೇಶದ ಜನರಿಗೆ‌ ಮೊದಲೇ ಸೂಚನೆ ನೀಡಿ ಅವರನ್ನು ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.‌

ಅಪಾಯವನ್ನರಿತು ತಕ್ಷಣ ಕ್ರಮಕೈಗೊಳ್ಳಿ, ರಜೆ ಹಾಕದೇ ಕೇಂದ್ರ ಸ್ಥಾನದಲ್ಲೇ ಇರಬೇಕು. ತಾಲೂಕು ಕಚೇರಿಯಲ್ಲಿ ಈಗಾಗಲೇ ಕಂಟ್ರೋಲ್ ರೂಂ ತೆರೆಯಲಾಗಿದೆ. (08257-231231) ಅದು ದಿನದ 24 ಗಂಟೆಯೂ‌ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ಹೇಳಿದರು.