ಏನೆಕಲ್ಲು: ಪರಿಸರ ದಿನಾಚರಣೆ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಮತ್ತು ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವತಿಯಿಂದ ಏನೆಕಲ್ಲು ತೆಂಗಿನ ತೋಟ ದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ.5 ರಂದು ಆಚರಿಸಲಾಯಿತು.

ಆ ಪ್ರಯುಕ್ತ ಹಣ್ಣಿನ ಗಿಡಗಳನ್ನು ನೆಡಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್, ಕಾರ್ಯದರ್ಶಿ ಮೋನಪ್ಪ ಡಿ, ಗ್ರಾ.ಪಂ ಸದಸ್ಯೆ ಶಶಿಕಲಾ, ಒಕ್ಕೂಟ ದ ಉಪಾಧ್ಯಕ್ಷೆ ರಮಣಿ ಕೆ, ಕಾರ್ಯದರ್ಶಿ ಮೀನಾಕ್ಷಿ ಪಿ ಏನೆಕಲ್ಲು, ಅಂಗನವಾಡಿ ಕೇಂದ್ರದ ಶಿಕ್ಷಕಿ ಜಯಲಕ್ಷ್ಮಿ, ಎಂ.ಬಿ.ಕೆ, ಹೇಮಾವತಿ, ಎಲ್ ಸಿ ಆರ್ ಪಿ ರತ್ನಕುಮಾರಿ, ಪಶುಸಖಿ ಶಶಿಕಲಾ, ಸಂಜೀವಿನಿ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.