ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾಗಿ ಈರಯ್ಯ ದೂಂತೂರು ನೇಮಕ ಆದೇಶ

0

ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾಗಿ ಬೆಂಗಳೂರು ಮೂಲದ ಈರಯ್ಯ ದೂಂತೂರು ಅವರನ್ನು ನೇಮಕ‌ ಮಾಡಿ ಸರಕಾರ ಆದೇಶ ಮಾಡಿದೆ.


ಸುಳ್ಯ ಎಸ್ಐ ಆಗಿರುವ ದಿಲೀಪ್ ಜಿ.ಆರ್. ಅವರಿಗೆ ವರ್ಗಾವಣೆಯಾಗಿದ್ದು ಕಳೆದ ಎರಡು ವರ್ಷಗಳಿಂದ ದಿಲೀಪ್ ಸುಳ್ಯ ಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2014ನೇ ಬ್ಯಾಚ್‌ನ ಅಧಿಕಾರಿಯಾದ ಈರಯ್ಯ ದೂಂತೂರು ಅವರು ಬಂಟ್ವಾಳ ಹಾಗೂ ವಿಟ್ಲದಲ್ಲಿ ಪ್ರೊಬೇಷನರಿ ಎಸ್‌ಐ ಆಗಿ ಬಳಿಕ ಬೆಳ್ಳಾರೆ ಠಾಣೆಯಲ್ಲಿ ಉಪನಿರೀಕ್ಷಕರಾಗಿದ್ದರು.

ಬಳಿಕ ಉಪ್ಪಿನಂಗಡಿ, ಶಿರಸಿಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಕುಂದಾಪುರದಲ್ಲಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.