ಬಿ ಯಂ ಎಸ್ ಘಟಕ ಗುತ್ತಿಗಾರು ಆಶ್ರಯದಲ್ಲಿ ಬಿ ಯಂ ಎಸ್ ಸಂಸ್ಥಾಪನ ದಿನಾಚರಣೆ

0

ಆಟೋ ರಿಕ್ಷಾ ಚಾಲಕರ ಸಂಘ ಬಿ ಯಂ ಎಸ್ ಘಟಕ ಗುತ್ತಿಗಾರು ಇದರ ಆಶ್ರಯದಲ್ಲಿ ಬಿ ಯಂ ಎಸ್ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಇಂದು ಆಚರಿಸಲಾಯಿತು.

ಭಾರತ ಮಾತೆಯ ಫೋಟೋ ಗೆ ಹೂ ಹಾರ ಹಾಕಿ ಪುಷ್ಷಾರ್ಚನೆ ಮಾಡಿ ಭಾರತೀಯ ಮಜ್ದೂರು ಸಂಘದ ಸಂಸ್ಥಾಪಕಾದ ಶ್ರೀ ಎಂ.ಬಾಲಗಂಗಾಧರ ತಿಲಕರ ಕಾರ್ಮಿಕ ಸಂಘಟನೆಯ ಧ್ಯೇಯೋದ್ದೇಶಗಳನ್ನು ನೆನಪಿಸಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ ಯಂ ಎಸ್ ಘಟಕ ಗುತ್ತಿಗಾರು ಇದರ ಪದಾಧಿಕಾರಿಗಳು ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಸಿಹಿ ತಿಂಡಿ ವಿತರಿಸಲಾಯಿತು.